ಸಮೃದ್ಧ ಬೈಂದೂರು ಪರಿಕಲ್ಪನೆ ಅಡಿಯಲ್ಲಿ ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನಲ್ಲಿ ಕಾಲು ಸಂಕಗಳ ನಿರ್ಮಾಣ ವೇಗವಾಗಿ ಸಾಗುತಿದ್ದು, ಹೊಸದಾಗಿ ಎರಡು ಕಾಲುಸಂಕಗಳನ್ನು ಇದೀಗ ಉದ್ಘಾಟಿಸಲಾಗಿದೆ.

ಅರುಣಾಚಲಂ ಟ್ರಸ್ಟ್ ಕಾಲು ಸಂಕ ಉಪಕ್ರಮದಡಿಯಲ್ಲಿ ಹೊಸಂಗಡಿ ಗ್ರಾಮದ ಕೆರೆಬೈಲು, ಗೋಳಿಹೊಳೆ ಗ್ರಾಮದ ಕೊಡಾಡ್ಕಿಯಲ್ಲಿ ಕಾಲು ಸಂಕಗಳನ್ನು ನಿರ್ಮಿಸುವುದರ ಮೂಲಕ ಆ ಭಾಗದ ಗ್ರಾಮಸ್ಥರ ಮನವಿಗೆ ಸ್ಪಂದಿಸಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಬೈಂದೂರಿನ ಶಾಸಕ ಗುರುರಾಜ್ ಗಂಟಿಹೊಳೆ, ಅರುಣಾಚಲಂ ಚಾರಿಟೇಬಲ್ ಟ್ರಸ್ಟ್ ಪ್ರವರ್ತಕ ಆರ್. ಅರುಣಾಚಲಂ, ವ್ಯವಸ್ಥಾಪಕ ರಮೇಶ್ ಅರುಣಾಚಲಂ, ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷರಾದ ಅನಿತಾ ಆರ್.ಕೆ ಸೇರಿದಂತೆ ಹಲವರು ಇದ್ದರು.