ಉಡುಪಿ: ಜಿಲ್ಲೆಯ ಬಾಳೆಕುದ್ರು ಮಠಾಧೀಶ ಬ್ರಹ್ಮೈಕ್ಯರಾಗಿದ್ದಾರೆ.
ಶ್ರೀನೃಸಿಂಹ ಸ್ವಾಮೀಜಿ(51) ಬಾಳೆಕುದ್ರು ಮಠಾಧೀಶರು ಇಹಲೋಕ ತ್ಯಜಿಸಿದ್ದಾರೆ. ಬಾಳೆಕುದ್ರು ಮಠ ಭಾಗವತ ಸಂಪ್ರದಾಯಕ್ಕೆ ಸೇರಿದ್ದಾಗಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾಳೆಕುದ್ರು ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. 2006 ರಲ್ಲಿ ಸ್ವಾಮೀಜಿಗೆ ಪೀಠಾರೋಹಣ ಅಗಿತ್ತು. ಇಂದು ಸಂಜೆ ನಾಲ್ಕು ಗಂಟೆಗೆ ಅಂತಿಮ ವಿಧಿವಿಧಾನ ನೆರವೇರಿಸಲಾಗಿದೆ.