ದಾವಣಗೆರೆ: ಆನ್ ಲೈನ್ ಗ್ಯಾಂಬ್ಲಿಂಗ್ ನಲ್ಲಿ ಮೋಸ ಹೋಗಿ ಯವಕ ಆತ್ಮಹತ್ಯೆ ಮಾಡಿಕೊಂಡಿರುವ ಮತ್ತೊಂದು ಸೆಲ್ಫಿ ವಿಡಿಯೋ ಲಭ್ಯವಾಗಿದೆ.
ಮೃತ ಶಶಿಕುಮಾರ್ ಮಾಡಿದ್ದ ಮತ್ತೊಂದು ಸೆಲ್ಫಿ ವಿಡಿಯೋ ಲಭ್ಯವಾಗಿದೆ. ಆನ್ ಲೈನ್ ಗೇಮಿಂಗ್ ಆ್ಯಪ್ ಪ್ರಮೋಟರ್ಸ್ ವಿರುದ್ಧ ಕ್ರಮಕ್ಕೆ ಶಶಿಕುಮಾರ್ ಆಗ್ರಹಿಸಿದ್ದಾರೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಆಪ್ ಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಆಪ್ ನಿಂದ ನಾನು ಗೆದ್ದ ದುಡ್ಡು ಬರುವುದು ಬೇಡ. ಜನರಿಗೆ ಮೋಸ ಮಾಡುತ್ತಿರುವ ಆಪ್ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಆನ್ ಲೈನ್ ಗ್ಯಾಂಬ್ಲಿಂಗ್‌ನಲ್ಲಿ ದುಡ್ಡು ಕಳೆದುಕೊಂಡವರು ಕೂಡ ದೂರು ಸಲ್ಲಿಸಬೇಕು ಎಂದು ಯುವಕ ಮನವಿ ಮಾಡಿದ್ದಾರೆ.