ಚಂದ್ರಮುಖಿ ಪ್ರಾಣಸಖಿ ನಟಿ ಬಾಳಲ್ಲೀಗ ತಾಯ್ತನದ ತಂಗಾಳಿ ಬೀಸಿದೆ. ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿ ಭಾವನ ಇದೀಗ ಐವಿಎಫ್ ಮೂಲಕ ಮಕ್ಕಳನ್ನು ಪಡೆಯಲು ಮುಂದಾಗಿದ್ದಾರೆ.
ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಖುದ್ದು ಹಂಚಿಕೊಂಡಿರುವ ಭಾವನ, ಮದುವೆಯಾಗದೆ ಕಾನೂನಾತ್ಮಕವಾಗಿ ಮಕ್ಕಳನ್ನು ಐವಿಎಫ್ ಮೂಲಕ ಪಡೆಯುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಅವಳಿ ಮಕ್ಕಳ ನಿರೀಕ್ಷೆಯಲ್ಲಿರುವ ಭಾವನಾ, ತಮ್ಮ ಫೋಟೋವನ್ನ ಶೇರ್ ಮಾಡುವ ಮೂಲಕ ಜಗತ್ತಿಗೆ ತಾವು ಸಿಂಗಲ್ ಪೇರೆಂಟ್ ಆಗ್ತಿರುವ ಸಂತಸದ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.