ಬೆಂಗಳೂರು: ರಾಜ್ಯದಲ್ಲಿ ಸರಣಿ ಹೃದಯಾಘಾತ ಪ್ರಕರಣಗಳು ವರದಿಯಾಗುತ್ತಿವೆ. ಆದರೆ, ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಹೃದಯ ಚಿಕಿತ್ಸೆಗಾಗಿ ಕೇವಲ 7 ಆಸ್ಪತ್ರೆಗಳಿವೆ. ಕೆಲ ಜಿಲ್ಲೆಗಳಲ್ಲಿ ಸರ್ಕಾರಿ ಹೃದ್ರೋಗ ಆಸ್ಪತ್ರೆಗಳು ಇಲ್ಲ. ಇದ್ದ ಆಸ್ಪತ್ರೆಗಳಲ್ಲಿ ಹೃದ್ರೋಗ ತಜ್ಞರ ಕೊರತೆ ಕಾಡುತ್ತಿದೆ.
ಯಾವ ಆಸ್ಪತ್ರೆಯಲ್ಲಿ ಹೃದ್ರೋಗ ಚಿಕಿತ್ಸೆ?
- ಬಳ್ಳಾರಿ ಮೆಡಿಕಲ್ ಕಾಲೇಜು ಮತ್ತು ರಿಸರ್ಚ್ ಸೆಂಟರ್
- ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ರಿಸರ್ಚ್ ಸೆಂಟರ್ ಬೆಂಗಳೂರು
- ಜಯದೇವ ಹೃದ್ರೋಗ ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್
- ಕರ್ನಾಟಕ ಮೆಡಿಕಲ್ ಕಾಲೇಜು ಮತ್ತು ರಿಸರ್ಚ್ ಸೆಂಟರ್ ಹುಬ್ಬಳ್ಳಿ
- ಹಾಸನ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ಹಾಸನ
- ರಾಜೀವ ಗಾಂಧಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ, ರಾಯಚೂರು
- ಶಿವಮೊಗ್ಗ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ, ಶಿವಮೊಗ್ಗ
ಬೆಂಗಳೂರಿನ 2 ಆಸ್ಪತ್ರೆಗಳಲ್ಲಿ ಮಾತ್ರ ಹೃದ್ರೋಗ ಆಸ್ಪತ್ರೆಗಳು
- ಜಯದೇವ ಹೃದ್ರೋಗ ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್
- ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ರಿಸರ್ಚ್ ಸೆಂಟರ್ ಬೆಂಗಳೂರು
ಆದರೆ, ಬೆಂಗಳೂರಿನಲ್ಲಿ ಒಂದು ಮಾತ್ರ ಕಾರ್ಡಿಯೋ ಸ್ಪೇಷಾಲಿಟಿ ಆಸ್ಪತ್ರೆ ಇದೆ. ವೈದ್ಯಕೀಯ ಶಿಕ್ಷಣ ಇಲಾಖೆ ಜಯದೇವ ಆಸ್ಪತ್ರೆಯ ಮೇಲೆಯೇ ಅವಲಂಬನೆಯಾಗಿದೆ. ರಾಜ್ಯದಲ್ಲಿ ಹೃದ್ರೋಗಿಗಳಿಗೆ ಒಟ್ಟು 1,936 ಬೆಡ್ ಗಳ ವ್ಯವಸ್ಥೆ ಇದೆ.ಇಡೀ ರಾಜ್ಯದಲ್ಲಿ ಕೇವಲ 154 ಸರ್ಕಾರಿ ಹೃದ್ರೋ ತಜ್ಞರಿದ್ದಾರೆ. ಆ ಪೈಕಿ ಅದರಲ್ಲಿ 35 ಮಂದಿ CTVS ( cardio thoracic and vascular surgery) ಇದ್ದಾರೆ. 138 ವೈದ್ಯರು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 34 ಮಂದಿ CTVS ಬೆಂಗಳೂರಿನಲ್ಲೇ ಕಾರ್ಯ ನಿರ್ವಹಣೆ ( cardio thoracic and vascular surgery) ಮಾಡುತ್ತಿದ್ದಾರೆ. ಹೀಗಾಗಿ ಯಾವುದೇ ಸರ್ಜರಿ ಇದ್ದರೂ ರೋಗಿಗಳು ಬೆಂಗಳೂರಿಗೆ ಬರುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.