ಯಾದಗಿರಿ : ರಾಜ್ಯದಲ್ಲಿ ಹೃದಯಾಘಾತದ ಸರಣಿ ಮುಂದುವರೆದಿದೆ. ಈಗಾಗಲೇ ರಾಜ್ಯದಲ್ಲಿನ ಜನರು ಸಹ ಆತಂಕದಲ್ಲಿದ್ದಾರೆ. ಹೃದಯಾಘಾತ ತಡೆಗಟ್ಟುವ ನಿಟ್ಟಿನಲ್ಲಿ ಯಾದಗಿರಿ ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ.
ಹೃದಯಾಘಾತದ ಬಗ್ಗೆ ಆರೋಗ್ಯ ಇಲಾಖೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ. ಹೃದಯಾಘಾತದ ಬಗ್ಗೆ ಜಾಗೃತಿ ಮೂಡಿಸಲು ಆರೋಗ್ಯ ಅರಿವು ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಯಾದಗಿರಿ ತಾಲೂಕಿನ ಹತ್ತಿಕುಣಿ ಗ್ರಾಮದಲ್ಲಿ ಕಾರ್ಯಕ್ರಮ ನಡೆಸಲಾಯಿತು.
ಯೋಗ, ದ್ಯಾನ ಮಾಡುವುದರಿಂದ ಹೃದಯಾಘಾತ ತಡೆಗಟ್ಟಬಹುದು ಎಂಬ ನಿಟ್ಟಿನಲ್ಲಿ ಶಿಬಿರ ಆಯೋಜಿಸಲಾಗಿದೆ. ಹತ್ತಿಕುಣಿ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಯೋಗ ಮಾಡಿದೆ. ಈ ವೇಳೆ ಹೃದಯಾಘಾತಕ್ಕೊಳಗಾದ ರೋಗಿಗೆ ಪ್ರಥಮ ಚಿಕಿತ್ಸೆಯನ್ನು ಯಾವ ರೀತಿ ನೀಡಬೇಕು ಎಂಬ ಕುರಿತು ಅರಿವು ಮೂಡಿಸಲಾಯಿತು.