ಕಳೆದ ಎರಡು ದಿನದಿಂದ ಸುರಿದ ಭಾರೀ ಮಳೆಗೆ ಕಾರವಾರದ ಕದ್ರಾದಿಂದ ಬಾಳೆಮನಿ, ಸುಳಗೇರಿ ಮಾರ್ಗವಾಗಿ ಕೂಡಸಳ್ಳಿ ಅಣೆಕಟ್ಟಿಗೆ ಹಾದುಹೋಗುವ ರಸ್ತೆಯ ಮೇಲೆ ಗುಡ್ಡ ಕುಸಿದಿದೆ.
ಅದೊಂದು ಅರಣ್ಯ ಪ್ರದೇಶವಾದ ಕಾರಣ ಯಾವುದೇ ಸಾವು ನೋವು ಸಂಭವಿಸಿಲ್ಲ. ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಆ ಮಾರ್ಗವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಉತ್ತರಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಭೂಕುಸಿತವಾದ ಸ್ಥಳ ಕದ್ರಾ ಅಣೆಕಟ್ಟಿನಿಂದ 12 ಕಿ.ಮೀ ಹಾಗೆಯೇ ಕೊಡಸಳ್ಳಿ ಅಣೆಕಟ್ಟಿನಿಂದ 22 ಕಿ.ಮೀ ದೂರದಲ್ಲಿದ್ದು ಯಾವುದೇ ಅಪಾಯವಿಲ್ಲವೆಂದು ಅಧಿಕಾರಿಗಳು ಹೇಳಿದ್ದಾರೆ.