ನೀವು ಓಲಾ-ಊಬರ್ ಬಳಕೆ ಮಾಡುತ್ತಿದ್ದೀರಾ? ಹಾಗದರೆ ತಪ್ಪದೆ ಈ ಸ್ಟೋರಿ ನೋಡಿ
ನೀವು ಓಲಾ, ಊಬರ್ ಬಳಕೆ ಮಾಡ್ತಿದ್ದೀರಾ. ಹಾಗಿದ್ರೆ, ಇನ್ಮುಂದೆ ಪೀಕ್ ಅವರ್ ನಲ್ಲಿ ನಿಮಗೆ ಈ ಕ್ಯಾಬ್ ಸೇವೆ ಕೈಸುಡುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.
ಹೌದು, ಇನ್ಮುಂದೆ ಪೀಕ್ ಅವರ್ ನಲ್ಲಿ ಈ ಕ್ಯಾಬ್ ಸೇವೆಗಳು ಈಗಿರುವ ದರದ ದುಪ್ಪಟ್ಚಾಗುವ ಸಾಧ್ಯತೆಗಳಿವೆ. ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕ್ಯಾಬ್ ಅಗ್ರಿಗೇಡರ್ ಗಳು ತೀವ್ರ ಬೇಡಿಕೆ ಇರುವ ಸಂದರ್ಭಗಳಲ್ಲಿ ದುಪ್ಪಟ್ಟು ದರ ವಿಧಿಸುವ ಅವಕಾಶಕ್ಕೆ ಸಮ್ಮತಿ ನೀಡಿದೆ. ಹೀಗಾಗಿ ಶೀಘ್ರವೇ ಗ್ರಾಹಕರ ಜೇಬಿಗೆ ಈ ದುಪ್ಪಟ್ಟು ಹಣದ ಕತ್ತರಿ ಬೀಳುವ ಕಾಲ ಸನ್ನಿಹಿತವಾಗುತ್ತಿದೆ.