ಒಂದೆಡೆ ಡಿ.ಕೆ. ಶಿವಕುಮಾರ್ ಪರ ಆಪ್ತರು ಅಖಾಡಕ್ಕಿಳಿದಿದ್ದರೆ ಇತ್ತ ಸಿದ್ದು ಗ್ಯಾಂಗ್ ಕೂಡಾ ಫುಲ್ ಅಲರ್ಟ್ ಆಗಿದೆ. ಯಾವಾಗ ಇಕ್ಬಾಲ್ ಹುಸೇನ್ ಡಿಕೆಶಿ ಪರ ಬ್ಯಾಟ್ ಬೀಸಿದರೋ ಅತ್ತ ಸಿಎಂ ಆಪ್ತರ ಮಾತಿನ ವರಸೆಯೂ ಬದಲಾಗಿತ್ತು. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲಾ. ಯಾರಿಗೂ ಈ ವಿಚಾರದಲ್ಲಿ ಅನುಮಾನ ಬೇಡ ಅಂತಾ ಹಿರಿಯ ಸಚಿವ ಹೆಚ್ ಸಿ ಮಹದೇವಪ್ಪ ಸ್ಪಷ್ಟಪಡಿಸಿದ್ದಾರೆ.
ಇಕ್ಬಾಲ್ ಹುಸೇನ್ ಒಬ್ಬರ ಅಭಿಪ್ರಾಯ 140 ಶಾಸಕರ ಒಟ್ಟು ಅಭಿಪ್ರಾಯವಾಗೋದಿಲ್ವಲ್ಲಾ ಅಂತಾ ಹೇಳುವ ಮೂಲಕ ಸಚಿವ ಸಂತೋಷ್ ಲಾಡ್ ಡಿಕೆ ಬಣಕ್ಕೆ ಟಾಂಗ್ ನೀಡಿದ್ದರು. ಹಾಗೆ ನೋಡಿದ್ರೆ ಸಿದ್ದರಾಮಯ್ಯ ಎಂದೋ ಸಿಎಂ ಆಗಬೇಕಿತ್ತು. ಅಂದು ಜೆ.ಹೆಚ್. ಪಟೇಲ್ ಮತ್ತು ಅವರ ನಡುವೆ ಪೈಪೋಟಿ ಇತ್ತು. ಆಗ ಅವರು ಉಪ ಮುಖ್ಯಮಂತ್ರಿಯಾಗಿದ್ದರು ಅಂತಾ ಹೇಳುವ ಮೂಲಕ ಬಿ.ಆರ್. ಪಾಟೀಲರ ಲಾಟ್ರಿ ಸಿಎಂ ಹೇಳಿಕೆಗೆ ರಾಮಲಿಂಗಾ ರೆಡ್ಡಿ ಟಾಂಗ್ ನೀಡಿದ್ದಾರೆ. ಒಟ್ಟಿನಲ್ಲಿ ರಾಜ್ಯ ರಾಜಕೀಯದಲ್ಲಿ ಎದ್ದಿದ್ದ ಬದಲಾವಣೆ ಕೂಗು ಈಗ ಹೊಸ ಆಯಾಮಕ್ಕೆ ತಿರುಗಿರುವುದು ಸುಳ್ಳಲ್ಲ.