ಐ ಹ್ಯಾವ್ ನೋ ಅದರ್ ಆಫ್ಷನ್. ಕಡೆಗೂ ಸಿಎಂ ಕುರ್ಚಿ ರೇಸ್ ನಲ್ಲಿ ಡಿ ಕೆ ಶಿವಕುಮಾರ್ ಶಸ್ತ್ರ ತ್ಯಾಗ ಮಾಡಿಬಿಟ್ರಾ? ಹಾಗಿದ್ರೆ ಈ ಹಿಂದೆ ಅಧಿಕಾರಕ್ಕೇರುವ ಮುನ್ನ ದೆಹಲಿಯಲ್ಲಿ ನಡೆದಿದ್ದ ಮಾತುಕತೆಗಳೆಲ್ಲಾ ನೀರಿನಲ್ಲಿ ಹೋಮ ಎನ್ನುವಂತಾಯ್ತಾ? ಎಂಬ ಪ್ರಶ್ನೆಯೊಂದು ಮೂಡಿದೆ.
ಹೌದು! ಒಂದೆಡೆ ಸಿದ್ದರಾಮಯ್ಯ ನಾನೇ ಪೂರ್ಣಾವಧಿ ಸಿಎಂ ಅಂತಾ ಘೋಷಿಸಿದ್ದಾರೆ. ಇನ್ನೊಂದೆಡೆ ಡಿಕೆಶಿ ಕೂಡ ಶಸ್ತ್ರ ತ್ಯಾಗದ ಮಾತುಗಳನ್ನಾಡಿದ್ದಾರೆ. ಐ ಹ್ಯಾವ್ ನೋ ಅದರ್ ಆಫ್ಷನ್, ಅಂದ್ರೆ ಸಿದ್ದರಾಮಯ್ಯರನ್ನು ಬೆಂಬಲಿಸೋದನ್ನು ಬಿಟ್ಟು ನನಗೆ ಬೇರೆಯಾವ ಅಯ್ಕೆಗಳಿಲ್ಲ ಅಂತಾ ಕೈಚೆಲ್ಲಿದ್ದಾರೆ.
ಅಷ್ಟೇ ಅಲ್ಲಾ ಅವರ ಸಿಎಂ ಆಗುವ ಕನಸನ್ನು 2028ಕ್ಕೆ ಮುಂದೂಡಿಕೆ ಮಾಡಿದಂತಿದೆ. ಮುಂದಿನ ಬಾರಿಯೂ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನಾವು ಕಾರ್ಯ ನಿರ್ವಹಿಸಬೇಕಿದೆ. ನಮ್ಮ ಚಿತ್ತ ಈ ಗುರಿಯನ್ನು ಸಾಧಿಸುವತ್ತ ಇರಬೇಕು ಅಂತಾ ಹೇಳುವ ಮೂಲಕ ಡಿಕೆಶಿ ತಮ್ಮ ಕನಸನ್ನು ಮುಂದಿನ ಅವಧಿಗೆ ಶಿಫ್ಟ್ ಮಾಡಿದಂತೆ ಕಾಣುತ್ತಿದೆ. ಈ ಮೂಲಕ ರಾಜ್ಯ ಕಾಂಗ್ರೆಸ್ ನಲ್ಲಿ ಒಳಗೊಳಗೇ ಕುದಿಯುತ್ತಿದ್ದ ಸಿಎಂ ಕುರ್ಚಿಗಾಗಿನ ಶೀತಲ ಸಮರದ ಬೆಂಕಿ ಸದ್ಯಕ್ಕೆ ಶಾಂತವಾದಂತೆ ಕಾಣುತ್ತಿದೆ.