ಸಿಎಂ ಕುರ್ಚಿಯನ್ನು ಮತ್ತಷ್ಟು ಬಲ ಪಡಿಸಿಕೊಂಡ್ರಾ ಸಿದ್ದರಾಮಯ್ಯ ಎನ್ನುವ ಪ್ರಶ್ನೆ ಈಗ ಎಲ್ಲರಲ್ಲೂ ಮೂಡುತ್ತಿದೆ.
ರಾಮನಗರ ಶಾಸಕ ಇಕ್ಬಾಲ್ ಹುಸೇನ್, ಚನ್ನಗಿರಿ ಶಾಸಕ ಶಿವಗಂಗಾ ಪದೇಪದೆ ಡಿಕೆ ಶಿವಕುಮಾರ್ ಮುಂದಿನ ಸಿಎಂ ಅನ್ನೋ ಧಾಟಿಯಲ್ಲೇ ಬಹಿರಂಗ ಹೇಳಿಕೆಗಳನ್ನು ನೀಡುತ್ತಲೇ ಸಾಗಿದ್ದರು. ಆದರೆ, ಈ ಮಾತುಗಳ ನಡುವೆಯೇ ಬ್ರಹ್ಮಾಸ್ತ್ರ ಸಿಡಿಸಿರುವ ಸಿದ್ದರಾಮಯ್ಯ, ನಾನೇ 5 ವರ್ಷ ಸಿಎಂ ಅಂತಾ ಘೋಷಿಸಿದ್ದಾರೆ. ಅದು ಕೂಡಾ ಪಕ್ಷದ ಉಸ್ತುವಾರಿ ರಾಜ್ಯ ಪ್ರವಾಸದಲ್ಲಿದ್ದಾಗಲೇ ಇಂಥಾ ಸಂದೇಶ ರವಾನಿಸಿ, ಕರ್ನಾಟಕ ಕಾಂಗ್ರೆಸ್ ಗೆ ನಾನೇ ಬಾಸ್ ಅಂತಾ ತಿರುಗೇಟು ನೀಡಿದ್ದಾರೆ.