ಶಿವಮೊಗ್ಗ: ಕೋಳಿ ತುಂಬಿದ ಲಾರಿ ಪಲ್ಟಿಯಾಗಿದ್ದು, ಮಾನವೀಯತೆ ಮರೆತ ಜನ ಕೈಗೆ ಸಿಕ್ಕ ಸಿಕ್ಕ ಕೋಳಿಗಳನ್ನು ಕೈಗೆ ಸಿಕ್ಕಷ್ಟು ತೆಗೆದುಕೊಂಡು ಹೋಗಿರುವ ಘಟನೆ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ-ಹೊಸೂರು ಬಳಿ ಈ ಘಟನೆ ನಡೆದಿದೆ. ತಿರುವಿನಲ್ಲಿ ದಿಢೀರನೆ ಕಾರ ಎದುರು ಬಂದ ಪರಿಣಾಮ ನಿಯಂತ್ರಣ ತಪ್ಪಿ ಕಾರು ಉರುಳಿ ಬಿದ್ದಿದೆ ಎನ್ನಲಾಗಿದೆ.
8ಕೋಳಿ ತುಂಬಿದ್ದ ಲಾರಿ ಪಲ್ಟಿಯಾಗಿ ನಡು ರಸ್ತೆಯಲ್ಲೇ ಉರುಳಿ ಬಿದ್ದೆ. ಪರಿಣಾಮ ಜನರು ಕೋಳಿಗಳನ್ನು ಹೊತ್ತುಕೊಂಡು ಹೋಗಲು ಮುಗಿ ಬಿದ್ದಿದ್ದಾರೆ. ಕೋಳಿಗಾಗಿ ನುಗ್ಗಿದ ಆನಂದಪುರ ಹಾಗೂ ಹೊಸೂರು ಗ್ರಾಮದ ಸುತ್ತಲಿನ ನಿವಾಸಿಗಳು ಕೋಳಿಗಾಗಿ ಮುಗಿ ಬಿದ್ದಿದ್ದಾರೆ.
ಸಾಗರದ ತಾಜ್ ಟ್ರೇಡರ್ಸ್ ಗೆ ಸೇರಿದ ಲಾರಿ ಇದಾಗಿದೆ ಎನ್ನಲಾಗಿದೆ. ನಾಲ್ಕೂವರೆ ಟನ್ ತೂಕದಷ್ಟು ಕೋಳಿಗಳನ್ನು ಸಾಗರಕ್ಕೆ ಸಾಗಣೆ ಮಾಡಲಾಗುತ್ತಿತ್ತು. ಅಪಘಾತದಿಂದ ಬಹಳಷ್ಟು ಕೋಳಿಗಳು ಸಾವಿಗೀಡಾಗಿದ್ದವು. ಇನ್ನೂ ಕೆಲವು ಜೀವನ್ಮರಣದ ಸ್ಥಿತಿಯಲ್ಲಿದ್ದವು. ರಸ್ತೆಯಲ್ಲಿ ಸಾಗುತ್ತಿದ್ದ ವಾಹನಗಳನ್ನು ನಿಲ್ಲಿಸಿ ಕೆಲವರು ಕೋಳಿಗಳನ್ನು ಕೊಂಡೊಯ್ದಿದ್ದಾರೆ. ಸುಮಾರು 8 ಲಕ್ಷ ರೂ. ಮೌಲ್ಯದ ಕೋಳಿಗಳು ವಾಹನದಲ್ಲಿದ್ದವು ಎನ್ನಲಾಗಿದೆ.


















