ಇಂದ್ರನ ಖಡ್ಗ ಎಂದು ಕರೆಯಲ್ಪಡುವ ಅತ್ಯಾಧುನಿಕ ಯುದ್ಧ ನೌಕೆ ಐ.ಏನ್.ಎಸ್ ತಮಾಲ್ ಭಾರತೀಯ ನೌಕಾಪಡೆಗೆ ಮಂಗಳವಾರ ಸೇರ್ಪಡೆಯಾಗಿದೆ.
ತಮಾಲ್ ಒಂದು ಯುದ್ಧ ನೌಕೆಯಾಗಿದ್ದು ಇದನ್ನು 2016ರ ಇಂಡೋ-ರಷ್ಯಾ ಒಪ್ಪಂದದ ಭಾಗವಾಗಿ ರಷ್ಯಾದ ಕಲಿನಿನ್ ಗ್ರಾಡ್ ನಲ್ಲಿರುವ ಯಂತಾರ್ ಶಿಪ್ ಯಾರ್ಡ್ ನಲ್ಲಿ ನಿರ್ಮಿಸಲಾಗಿದೆ. ಈ ಹಡಗು ಪ್ರಾಜೆಕ್ಟ್ 1135.6 ಸರಣಿಯಲ್ಲಿ ಎಂಟನೆಯದು ಮತ್ತು ತುಶಿಲ್ ವರ್ಗದ ಯುದ್ಧ ನೌಕೆಯಲ್ಲಿ ಎರಡನೆಯದು. ಬ್ರಹ್ಮೋಸ್ ಸೂಪರ್ ಸೋನಿಕ್ ಕ್ರೂಸ್ ಕ್ಷಿಪಣಿ, ಭಾರದ ಟೋರ್ಪಿಡೊಗಳೊಂದಿಗೆ ತಮಾಲ್ ತನ್ನ ತೂಕಕ್ಕಿಂತ ಹೆಚ್ಚಿನ ಹೊಡೆತಗಳನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ.

ತನ್ನ ಸುತ್ತಲೂ ಶತ್ರುಗಳನ್ನು ಹೊಂದಿರುವ ಭಾರತಕ್ಕೆ ಇದೊಂದು ಬ್ರಹ್ಮಾಸ್ತ್ರವಾಗಿದ್ದು ಯಾವುದೇ ರೆಡಾರ್ ನ ಕಣ್ಣು ತಪ್ಪಿಸಿ ದಾಳಿಮಾಡಿ ಹಿಂದಿರುಗಬಲ್ಲ ಶಕ್ತಿಯನ್ನು ಈ ಯುದ್ಧ ನೌಕೆ ಹೊಂದಿದೆ.ಐ.ಏನ್.ಎಸ್ ತಮಾಲ್ ಸುಮಾರು 250 ನಾವಿಕರು ಮತ್ತು 26 ಅಧಿಕಾರಿಗಳ ತಂಡ ಹೊಂದಿದ್ದು,” ಸರ್ವತ್ರ ಸರ್ವದ ವಿಜಯ “ಅಂದ್ರೆ ಎಲ್ಲೆಡೆಯೂ ಯಾವಾಗಲು ಗೆಲುವು ಎನ್ನುವುದು ಇದರ ಧ್ಯೆಯ ವಾಕ್ಯವಾಗಿದೆ. ಈ ಯುದ್ಧ ನೌಕೆಯನ್ನು ಪರಿಣಿತರಾದ ಕ್ಯಾಪ್ಟನ್ ಶ್ರೀಧರ್ ಟಾಟಾ ಮೊನ್ನೆಡೆಸುತ್ತಿದ್ದೂ ಕರ್ನಾಟಕದ ಕಾರವಾರ ಬಂದರಿಗೆ ಶೀಘ್ರದಲ್ಲೇ ಬರಲಿದೆ.
