ಮೈಸೂರು: ಚಾಮುಂಡಿ ಬೆಟ್ಟಕ್ಕೆ ಹ್ಯಾಟ್ರಿಕ್ ಹೀರೋ ಶಿವಣ್ಣ ಭೇಟಿ ನೀಡಿ ತಾಯಿಯ ದರ್ಶನ ಪಡೆದಿದ್ದಾರೆ.
ತಾಯಿ ಚಾಮುಂಡೇಶ್ವರಿ ಸನ್ನಿಧಾನಕ್ಕೆ ತೆರಳಿ ನಟ ಶಿವಣ್ಣ ಆಶೀರ್ವಾದ ಪಡೆದಿದ್ದಾರೆ. ಶಿವಣ್ಣ ಪತ್ನಿ ಸಮೇತರಾಗಿ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ. ಆಷಾಢ ಹಿನ್ನಲೆಯಲ್ಲಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶಿವಣ್ಣ ನೋಡಿ ಅಭಿಮಾನಿಗಳು ಸೆಲ್ಫಿಗಾಗಿ ಮುಗಿ ಬಿದ್ದಿದ್ದಾರೆ. ಈ ವೇಳೆ ಶಿವಣ್ಣ ನಗು ನಗುತ್ತಾ ಅಭಿಮಾನಿಗಳೊಂದಿಗೆ ಬೆರೆತಿದ್ದಾರೆ.