ಚಿಕ್ಕಮಗಳೂರು: ಮುರಿದು ಬೀಳುವ ಸ್ಥಿತಿಯಲ್ಲಿರುವ ಕಾಲುಸಂಕದಲ್ಲೇ ಜನರು ಕೈಯಲ್ಲಿ ಜೀವ ಹಿಡಿದುಕೊಂಡು ಸಾಗಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಶಿಥಿಲಾವಸ್ಥೆಯಲ್ಲಿರುವ ಕಾಲುಸಂಕದ ಮೇಲೆಯೇ ಗ್ರಾಮಸ್ಥರ ನಡೆಯುತ್ತಿದ್ದಾರೆ. 19 ವರ್ಷಗಳ ಹಿಂದೆ ಕಾಲುಸಂಕ ನಿರ್ಮಾಣವಾಗಿತ್ತು. ಈಗ ಅದು ಶಿಥಿಲಾವಸ್ಥೆಯಲ್ಲಿಯೇ ಇದ್ದು, ಅದನ್ನು ದುರಸ್ಥಿ ಪಡಿಸುವ ಕಾರ್ಯವಾಗಿಲ್ಲ. ಹೀಗಾಗಿ ಅದರ ಮೇಲೆಯೇ ಜನ ನಡೆಯುತ್ತಿದ್ದಾರೆ.
ಶೃಂಗೇರಿ ತಾಲೂಕಿನ ಸುಂಕದಮಕ್ಕಿ ಗ್ರಾಮದ ಜನರು ಈ ರೀತಿ ಪರದಾಟ ನಡೆಸುತ್ತಿದ್ದಾರೆ. ಧಾರಾಕಾರ ಮಳೆಗೆ ತುಂಗಾ ನದಿ ಮೈದುಂಬಿ ಹರಿಯುತ್ತಿದೆ. ಹೀಗಾಗಿ ಜನರು ಇದೇ ಕಾಲುಸಂಕದಿಂದಲೇ ಸಂಚಾರ ನಡೆಸಬೇಕು. ಶಾಲೆ, ಕಾಲೇಜು, ಆಸ್ಪತ್ರೆ ಸೇರಿದಂತೆ ನಿತ್ಯ ಓಡಾಟಕ್ಕೆ ಇದೇ ಕಾಲು ಸಂಕ ಅವಲಂಬನೆಯಾಗಿದೆ. ಸ್ವಲ್ಪ ಯಾಮಾರಿದರೂ ನದಿಯ ಪಾಲಾಗುವುದು ಗ್ಯಾರಂಟಿ. ಹೀಗಾಗಿ ಕಾಲುಸಂಕವನ್ನು ದುರಸ್ಥಿ ಮಾಡಬೇಕೆಂದು ಸ್ಥಳೀಯರು ಮನವಿ ಮಾಡುತ್ತಲೇ ಇದ್ದಾರೆ. ಆದರೆ, ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಈ ಕುರಿತು ತಲೆ ಕೆಡಿಸಿಕೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.