ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಹಿರಿಯ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ(Randeep Singh Surjewala) ಅವರು 14 ಶಾಸಕರ ಜೊತೆ ಒನ್ ಟು ಒನ್ ಸಭೆ ನಡೆಸಿದ್ದಾರೆ.
ಲಿಂಗಾಯತ ಸಮುದಾಯದ ಸಚಿವರು, ಶಾಸಕರ ಭೇಟಿಯ ನಂತರ ಚರ್ಚೆ ಆರಂಭಿಸಿದ್ದಾರೆ. ಶಾಸಕರಾದ ದೃವನಾರಾಯಣ, ಶಿವಲಿಂಗೇಗೌಡ, ಟಿ.ಡಿ. ರಾಜೇಗೌಡ, ನಯನ ಮೊಟಮ್ಮ ಸೇರಿದಂತೆ ಇನ್ನುಳಿದ ಶಾಸಕರೊಂದಿಗೆ ಸಭೆ ನಡೆಸಿದ್ದಾರೆ.
ಇದಕ್ಕೂ ಮುನ್ನ ಮಾತನಾಡಿದ ಸುರ್ಜೇವಾಲಾ, ಪಾಕಿಸ್ತಾನ ವಿಶ್ವಸಂಸ್ಥೆ ಸೆಕ್ಯೂರಿಟಿ ಕೌನ್ಸಿಲ್ ಲೀಡ್ ಮಾಡುತ್ತಿದೆ. ಇದು ಭಾರತಕ್ಕೆ ಆತಂಕಕಾರಿ ವಿಚಾರ. ಪಾಕಿಸ್ತಾನವೊಂದು ಭಯೋತ್ಪಾಕ ರಾಷ್ಟ್ರ. ಭಯೋತ್ಪಾದಕರನ್ನು ಭಾರತಕ್ಕೆ ಕಳುಹಿಸಿ ಅಶಾಂತಿ ಸೃಷ್ಟಿಸುತ್ತಿದೆ ಎಂದು ಹೇಳಿದ್ದಾರೆ.
ಪೆಹಲ್ಗಾಮ್ ನಲ್ಲಿ ನಡೆದಿರುವುದು ಪಾಕಿಸ್ತಾನ ಪ್ರೇರತ ದಾಳಿ. ವಿದೇಶಾಂಗ ಸಚಿವರು ಈ ವಿಷಯದಲ್ಲಿ ವಿಫಲರಾಗಿದ್ದಾರೆ. ಎಲ್ಲಾ ಉಗ್ರ ಸಂಘಟನಗಳಿಗೆ ಪ್ರೇರಣೆ ಪಾಕ್ ಆಗಿದೆ. ಯುನ್ ಭದ್ರತಾ ಮಂಡಳಿಯನ್ನು ಪಾಕ್ ಲೀಡ್ ಮಾಡುತ್ತಿದೆ. ಇದರಿಂದ ಭಾರತದ ವಿದೇಶಾಂಗ ನೀತಿ ಅಟ್ಟರ್ ಫ್ಲಾಫ್ ಆಗಿದೆ. ಉಗ್ರ ರಾಷ್ಟ್ರವೊಂದು ಹೇಗೆ ಸೆಕ್ಯೂರಿಟಿ ಕೌನ್ಸಿನಲ್‌ಹೆಡ್ (Security Counsel Head) ಆಗಲು ಸಾಧ್ಯ ಎಂದು ಗುಡುಗಿದ್ದಾರೆ.
ಪಾಕಿಸ್ತಾಕ್ಕೆ ಇಂತಹ ಅವಕಾಶ ಹೇಗೆ ಭಾರತ ನೀಡಿತು? ಎಂದು ಪ್ರಶ್ನಿಸಿದ ಅವರು, ಭಾರತದ ವಿದೇಶಾಂಗ ಸಚಿವರು ಏನು ಮಾಡುತ್ತಿದ್ದಾರೆ ಎಂದಿದ್ದಾರೆ.
ಪಾಕಿಸ್ತಾನ ವಿಶ್ವಸಂಸ್ಥೆಯ ಉಗ್ರ ವಿರೋಧಿ ಸಮಿತಿಯನ್ನು ಮುನ್ನಡೆಸುತ್ತಿದೆ. ಆದರೂ ಭಾರತ ಪ್ರತಿಭಟಿಸಿಲ್ಲ. ಮೋದಿ ವಿದೇಶಗಳನ್ನು ಸುತ್ತುತ್ತಿದ್ದಾರೆ. ಆದರೆ, ಯಾವ ದೇಶವೂ ನಮ್ಮೊಂದಿಗೆ ನಿಲ್ಲುತ್ತಿಲ್ಲ. ಐಎಂಎಫ್ ಪಾಕಿಸ್ತಾನಕ್ಕೆ ಹಣ ನೀಡಿದೆ. ಇದನ್ನು ಬೇರೆ ದೇಶಗಳು ವಿರೋಧಿಸಲಿಲ್ಲ. ಇದಕ್ಕೆ ಪ್ರಧಾನಿ ಮೋದಿ, ಜೈಶಂಕರ್ ಉತ್ತರಿಸಬೇಕು ಎಂದಿದ್ದಾರೆ.