ಬೆಂಗಳೂರು: ಹಾಸನದಲ್ಲಿ ಹೃದಯಾಘಾತದ ಮರಣ ಮೃದಂಗ ನಡೆಯುತ್ತಿದೆ. ಹಾರ್ಟ್ ಅಟ್ಯಾಕ್ ಗೆ ಸಾಲು ಸಾಲು ಸಾವುಗಳು ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲೇ ತಾಂತ್ರಿಕ ಸಮಿತಿ ರಚನೆ ಮಾಡಲಾಗಿದೆ.
ತಾಂತ್ರಿಕ ಸಮಿತಿಯ ವರದಿ ವೇಳೆ ಶಾಕಿಂಗ್ ವಿಚಾರವೊಂದು ಬಯಲಾಗಿದ್ದು, ಹಾಸನದ ಪ್ರಕರಣಗಳಿಗೆ ಇದೇ ವಿಷಯ ಮುಖ್ಯ ಕಾರಣ ಎನ್ನಲಾಗಿದೆ. ಮೇಲ್ನೋಟಕ್ಕೆ ಹಾಸನದ ಪ್ರಕರಣಗಳಿಗೆ ಇದೇ ಮುಖ್ಯ ಕಾರಣ ಎನ್ನಲಾಗಿದೆ.
ಅತಿಯಾದ ತೂಕ, ರೆಡ್ ಮೀಟ್ ಸೇವನೆಯಿಂದ ಸಾವು ಸಂಭವಿಸ್ತಾ? ಎಂಬ ಕುರಿತು ಡೀಪ್ ಸ್ಟಡಿ ಮಾಡುವುದಕ್ಕಾಗಿ ಸಮಿತಿ ರಚಿಸಲಾಗಿದೆ. ಒಂದು ವಾರದೊಳಗಾಗಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ತಾಂತ್ರಿಕ ಸಮಿತಿಗೆ ಸೂಚಿಸಲಾಗಿದೆ.
ಮೇಲ್ನೋಟಕ್ಕೆ ಸಾವಿಗೆ ಕಂಡು ಬಂದ ಕಾರಣಗಳು…
ಅತಿಯಾದ ಬೊಜ್ಜು, ಮಾಂಸ ಸೇವನೆ, ಮದ್ಯಪಾನದಿಂದ ಸಾವು ಸಂಭಿಸಿರುವ ಬಗ್ಗೆ ಅನುಮಾನ. ರೆಡ್ ಮೀಟ್ ಸೇವನೆಯಿಂದ ಕೊಲೆಸ್ಟ್ರಾಲ್ ಬಂದಿರುವ ಸಾಧ್ಯತೆ, ಅನ್ ಕಂಟ್ರೋಲ್ಡ್ ಕೊಲೆಸ್ಟ್ರಾಲ್ ನಿಂದ ಹೃದಯಾಘಾತ ಸಂಭವ. ಈ ಎಲ್ಲ ಕಾರಣಗಳನ್ನು ಸಮಿತಿ ಕಂಡುಕೊಂಡಿದೆ ಎಂದು ಜಯದೇವ ಆಸ್ಪತ್ರೆ ಮುಖ್ಯಸ್ಥ ಹಾಗೂ ಸಮಿತಿ ಅಧ್ಯಕ್ಷ ಕೆ.ಎಸ್. ರವೀಂದ್ರ ಹೇಳಿದ್ದಾರೆ.