ನಟ ಮಡೆನೂರು ಮನು (Madenuru Manu) ಅತ್ಯಾಚಾರ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿದ್ದಾರೆ. ಅತ್ಯಾಚಾರ ಪ್ರಕರಣದೊಂದಿಗೆ ಅವರ ವಿರುದ್ಧ ಹಲವು ಆರೋಪಗಳು ಕೂಡ ಕೇಳಿ ಬಂದಿದ್ದವು. ಸ್ಯಾಂಡಲ್‍ವುಡ್‍ನ ನಟರ ಸಾವಿನ ಬಗ್ಗೆ ಮಾತನಾಡಿದ ಆಡಿಯೋ ವೈರಲ್ ಆಗಿತ್ತು. ಹೀಗಾಗಿ ಫಿಲ್ಮ್ ಚೇಂಬರ್‌ಗೆ (Film Chamber) ಅವರ ಅಭಿಮಾನಿಗಳು ದೂರು ನೀಡಿ, ಶಾಶ್ವತವಾಗಿ ಬ್ಯಾನ್ ಮಾಡುವಂತೆ ಒತ್ತಾಯಿಸಿದ್ದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಬಂದ ಹಿನ್ನೆಲೆ ಕಾಮಿಡಿ ನಟ ಮಡೆನೂರು ಮನು ಅವರಿಗೆ ಚಿತ್ರರಂಗದಲ್ಲಿ ಹಾಗೂ ಕಿರುತೆರೆಯಲ್ಲಿ ಅಸಹಕಾರ ತೋರುವಂತೆ ಫಿಲ್ಮ್ ಚೇಂಬರ್ ನಿರ್ಧಾರ ಮಾಡಿತ್ತು. ಆದರೆ, ತಪ್ಪಿನ ಅರಿವಾಗಿ ನಟರಿಗೆ ಕ್ಷಮೆ ಕೋರಿ ಪತ್ರ ಬರೆದಿದ್ದ ಕಾಮಿಡಿ ನಟನಿಗೆ ಹೇರಿದ್ದ ಅಸಹಕಾರ ತೆರವುಗೊಳಿಸಲಾಗಿದೆ.
ದಿನಗಳಲ್ಲಿ ಸಿನಿಮಾ ರಂಗದಲ್ಲಿ, ಕಿರುತೆರೆಯಲ್ಲಿ ಹಾಗೂ ವೇದಿಕೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಕೋರಿ ಫಿಲ್ಮ್ ಚೇಂಬರ್‌ಗೆ ಮಡೆನೂರು ಮನವಿ ಮಾಡಿದ್ದರು. ಅಲ್ಲದೇ, ಫಿಲ್ಮೇ ಚೇಂಬರ್ ಗೆ ಭೇಟಿ ನೀಡಿದ್ದರು. ಈಗ ಫಿಲ್ಮ್ ಚೇಂಬರ್ ಎಚ್ಚರಿಕೆ ಕೊಟ್ಟು ಮುಂದೆ ಈ ರೀತಿಯಾದ ತಪ್ಪು ಮರುಕಳಿಸಬಾರು ಎಂದು ಹೇಳಿದೆ.