ಬೆಂಗಳೂರು: ನಾಳೆ ದ್ವಿತೀಯ ಪಿಯು-3ರ ಫಲಿತಾಂಶ ಪ್ರಕಟವಾಗಲಿದೆ.
ಮಧ್ಯಾಹ್ನ 1ಗಂಟೆಯ ನಂತರ ವೆಬ್‌ಸೈಟ್ ನಲ್ಲಿ ಕೆಎಸ್ ಇಎಬಿಯಿಂದ ಫಲಿತಾಂಶ ಪ್ರಕಟವಾಗಲಿದೆ. ಪರೀಕ್ಷೆ -3ಕ್ಕೆ 1,11,002 ವಿದ್ಯಾರ್ಥಿಗಳು ಹಾಜರಾಗಿದ್ದರು. ಅದರಲ್ಲಿ ಪರೀಕ್ಷೆ-1 ಹಾಗೂ 2ರಲ್ಲಿ ಉತ್ತೀರ್ಣರಾಗದ 82,683 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಒಟ್ಟು 262 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.
ಪರೀಕ್ಷೆ-3ಕ್ಕೆ ಶಿಕ್ಷಣ ಇಲಾಖೆಯ ಶುಲ್ಕ ವಿನಾಯಿತಿ ನೀಡಿತ್ತು. ಪರೀಕ್ಷೆಗೆ ಹಾಜರಾದ 1,11,002 ವಿದ್ಯಾರ್ಥಿಗಳಲ್ಲಿ 22,446 ಉತ್ತೀರ್ಣರಾಗಿದ್ದಾರೆ. ಶೇ. 20.22ರಷ್ಟು ಫಲಿತಾಂಶ ದಾಖಲಾಗಿದೆ.