ಬೀದರ್: ಬೀದರ್ ಕಾಂಗ್ರೆಸ್ ನಲ್ಲಿ ಮತ್ತೆ ಭಿನ್ನಮತ ಸ್ಫೋಟಗೊಂಡಿದ್ದು, ಭಾನುವಾರ ನಗರದ ಖಾಸಗಿ ಹೋಟೆಲ್ ನಲ್ಲಿ ಅತೃಪ್ತ ನಾಯಕರ ಸಭೆ ನಡೆದಿದೆ.
ಈಗ ಬೀದರ್ ಭಿನ್ನಮತೀಯರ ಸ್ಫೋಟ ಬೆಂಗಳೂರಿನಿಂದ ಬೀದರ್ ಗೆ ಶಿಫ್ಟ್ ಆಗಿದೆ. ಅತೃಪ್ತರ ಬಂಡಾಯ ಸಚಿವ ಈಶ್ವರ್ ಖಂಡ್ರೆ ಹಾಗೂ ರಹೀಂ ಖಾನ್ ಗೆ ದೊಡ್ಡ ಟೆನ್ಶನ್ ನೀಡುತ್ತಿದೆ.
ಈ ಸಭೆಯಲ್ಲಿ ಮಾಜಿ ಸಚಿವ ರಾಜಶೇಖರ್ ಪಾಟೀಲ್, ಮಾಜಿ ಎಂಎಲ್‌ಸಿ ಅರವಿಂದ ಅರಳಿ, ಎಂಎಲ್ ಸಿ ಚಂದ್ರಶೇಖರ್ ಪಾಟೀಲ್, ಭೀಮರಾವ್ ಪಾಟೀಲ್ ಭಾಗಿಯಾಗಿದ್ದರು.
ಈ ವೇಳೆ ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಅತೃಪ್ತರು ಭಾಗಿಯಾಗಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ ಬೆನ್ನಲ್ಲೇ ಬೀದರ್ ನಲ್ಲಿ ಭಿನ್ನಮತೀಯರ ಸಭೆ ನಡೆಸಲಾಗಿದೆ. ಬೀದರ್ ನಲ್ಲಿ ಭಿನ್ನಮತೀಯರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸತ್ಯ ಶೋಧನಾ ಸಮಿತಿಯಿಂದ ವರದಿ ತರಿಸಿಕೊಳ್ಳಲು ಡಿಕೆಶಿ ಮುಂದಾಗಿದ್ದಾರೆ.