ಕಾರವಾರ: ಕರಾವಳಿ ಸೇರಿದಂತೆ ರಾಜ್ಯದ ಬಹುತೇಕ ಕಡೆ ಉತ್ತಮ ಮಳೆಯಾಗುತ್ತಿದೆ. ಮಳೆಯಿಂದಾಗಿ ಜನ – ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದೆ. ಮಳೆ ನೀರಿನಲ್ಲಿ ಸಾಂಪ್ರದಾಯಿಕ ದೋಣಿಗಳು ನಿಂತಲ್ಲೇ ನಿಂತಿವೆ.
ಕಾರವಾರದ ಅಲಿಗದ್ದಾ ಕಡಲ ತೀರದಲ್ಲಿ ಸಾಂಪ್ರದಾಯಿಕ ದೋಣಿಗಳು ನಿಂತಲ್ಲೇ ನಿಂತಿವೆ. ಮಳೆಯಿಂದಾಗಿ ಅಲಿಗದ್ದಾ ಕಡಲತೀರದಲ್ಲಿ ಮಣ್ಣಿನಡಿ ದೋಣಿಗಳು ಸಿಲುಕಿವೆ. ವ್ಯಾಪಕ ಮಳೆಯಿಂದಾಗಿ ತೀರದಲ್ಲಿ ನಿಲ್ಲಿಸಿದ್ದ ದೋಣಿಗಳಿಗೆ ಹಾನಿಯಾಗಿದೆ.
ಅಲ್ಲದೇ, ಮೀನುಗಾರಿಕಾ ಬಲೆಗಳು ನಾಶವಾಗಿವೆ. ಪರಿಣಾಮ ದೋಣಿಗಳನ್ನು ರಕ್ಷಿಸಿಕೊಳ್ಳಲು ಮೀನುಗಾರರು ಹರಸಾಹಸ ಪಡುತ್ತಿದ್ದಾರೆ. ಮೀನುಗಾರರು ವಾಸಿಸುವ ಬೈತ್ಕೋಲ್ ಜನವಸತಿ ಪ್ರದೇಶಕ್ಕೆ ನೀರು ನುಗ್ಗಿದೆ. ಇದರಿಂದಾಗಿ ಜನರು ಕಂಗಾಲಾಗಿದ್ದಾರೆ.



















