ಇಡಿ ದಾಳಿಯ ಹಿನ್ನೆಲೆಯಲ್ಲಿ ಶಾಸಕರ ಭವನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಶಾಸಕರ ಭವನಕ್ಕೆ ಮಾಧ್ಯಮಗಳಿಗೂ ನಿರ್ಬಂಧ ಹೇರಲಾಗಿದೆ. ಶಾಸಕ ನಾಗೇಂದ್ರ ಕೊಠಡಿಗೆ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.
ಶಾಸಕರ ಭವನದ ನಾಲ್ಕನೇ ಕಟ್ಟಡದಲ್ಲಿ ನಾಗೇಂದ್ರ ಅವರ ಕೊಠಡಿ ಇದೆ. ನಾಲ್ಕನೇ ಕಟ್ಟಡದ ಬಳಿಯೂ ಪೊಲೀಸ್ ಕಾವಲಿದೆ.ಐಡಿ ಕಾರ್ಡ್ ಗಳನ್ನು ಪರಿಶೀಲಿಸಿ ಸಿಬ್ಬಂದಿಯನ್ನು ಪೊಲೀಸರು ಒಳಗೆ ಬಿಡುತ್ತಿದ್ದಾರೆ.


















