ಚಿನ್ನಸ್ವಾಮಿಯಲ್ಲಿ ಕಾಲ್ತುಳಿತ ಉಂಟಾದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನು ಬಿಸಿಸಿಐ ಬೇರೆಡೆ ಸ್ಥಳಾಂತರಿಸಿದೆ.
ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನು ಬಿಸಿಸಿಐ ಸ್ಥಳಾಂತರಿಸಿದೆ. ದರುಂತ ನಡೆದ ಹಿನ್ನೆಲೆಯಲ್ಲಿ ಬಿಸಿಸಿಐ ನಿಂದ ಪಂದ್ಯ ಸ್ಥಳಾಂತರ ಮಾಡಲಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಎ ಮತ್ತು ಸೌಥ್ ಆಫ್ರಿಕಾ ಎ ಪಂದ್ಯಗಳು ನಡೆಯಬೇಕಿದ್ದವು. ಆದರೆ, ದುರಂತ ನಡೆದ ಹಿನ್ನೆಲೆಯಲ್ಲಿ ಪಂದ್ಯಗಳನ್ನು ರಾಜ್ ಕೋಟ್ ಗೆ ಸ್ಥಳಾಂತರಿಸಲಾಗಿದೆ.
ಈ ಪಂದ್ಯಗಳು ನವೆಂಬರ್ ನಲ್ಲಿ ನಡೆಯಬೇಕಿದ್ದವು. ನ. 13ರಿಂದ 19ರ ವರೆಗೆ ಮೂರು ಏಕದಿನ ಪಂದ್ಯಗಳು ನಡೆಯಲಿದ್ದವು. ಆದರೆ, ಅವುಗಳನ್ನು ಬಿಸಿಸಿಐ ಸ್ಥಳಾಂತರಿಸಿ ಮಾಹಿತಿ ಹಂಚಿಕೊಂಡಿದೆ.



















