ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೋಟಕ ಮಾಹಿತಿಯನ್ನು ಸಿಐಡಿ ತಂಡ ಕಲೆ ಹಾಕುತ್ತಿದೆ.
ಕಾಲ್ತುಳಿತ ಆಗಿದ್ದರೂ ಕೆಎಸ್ ಸಿಎ ಸಿಬ್ಬಂದಿ ಪಾರ್ಟಿ ಮಾಡಿದೆ ಎನ್ನಲಾಗುತ್ತಿದೆ. ಕಾಲ್ತುಳಿತ ನಡೆಯುತ್ತಿodojt ಸ್ಟೇಡಿಯಂ ಒಳಗಿನ ಕ್ಲಬ್ ನಲ್ಲಿ ಕೆಎಸ್ ಸಿಎ ಮುಖ್ಯಸ್ಥರು ಪಾರ್ಟಿ ಮಾಡುತ್ತಿದ್ದರು ಎನ್ನಲಾಗಿದೆ. ಘನಘೋರ ಕಾಲ್ತುಳಿತ ನಡೆಯುತ್ತಿದ್ದರೂ ಪಾರ್ಟಿಯಲ್ಲಿ ಬ್ಯುಸಿಯಾಗಿದ್ರಾ? ಎಂಬ ಮಾಹಿತಿಗೆ ಸಂಬಂಧಿಸಿದಂತೆ ಪ್ರತ್ಯಕ್ಷದರ್ಶಿಗಳಿಂದ ಸಿಐಡಿ ತಂಡ ಮಾಹಿತಿ ಕಲೆ ಹಾಕುತ್ತಿದೆ. ಈಗಾಗಲೇ ಸಿಐಡಿ ತಂಡ ಸಿಸಿಟಿವಿ, ಮೊಬೈಲ್ ವೀಡಿಯೋಗಳನ್ನು ಕಲೆ ಹಾಕುತ್ತಿದೆ.