ಕಿರಾತಕರ ಮಚ್ಚಿನ ಏಟಿನಿಂದಾಗಿ ಗಾಯಗೊಂಡಿದ್ದ ಹಸು ನರಳಾಡಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಮೈಸೂರು ತಾಲ್ಲೂಕಿನ ಆನಗಳ್ಳಿ ಗ್ರಾಮದಲ್ಲಿ ನಡೆದಿದೆ.
5 ತಿಂಗಳ ಹಿಂದೆ ಮಚ್ಚಿನ ಏಟಿನಿಂದ ಬಸವ ಗಾಯಗೊಂಡಿದ್ದ. ಮಚ್ಚಿನಿಂದ ಬಸವನ ಹಿಂಬದಿಯ ಎರಡು ಕಡೆ ಕಿರಾತಕರು ಹೊಡೆದಿದ್ದರು. ಕಳೆದ ಐದು ತಿಂಗಳಿಂದ ಗ್ರಾಮಸ್ಥರು ಚಿಕಿತ್ಸೆ ನೀಡುತ್ತಿದ್ದರು. ರಕ್ತಸ್ರಾವದಿಂದ ಬಳಲಿ ಆಹಾರ ತ್ಯಜಿಸಿ ಬಸವ ನರಳುತ್ತಿದ್ದ. ಆದರೆ, ಇಂದು ಬೆಳಗ್ಗೆ ನೋವು ತಾಳಲಾರದೆ ಸಾವನ್ನಪ್ಪಿದೆ.
ಊರಿನ ಗ್ರಾಮದ ಜನರು ಹಸುವನ್ನು ಊರ ಬಸವ ರಿಂದ ಹಸುವನ್ನು ಊರಬಸವ ಎಂದು ಕರೆಯುತ್ತಿದ್ದರು. ಮೈಸೂರಿನ ಜಯಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


















