ಕೊವಿಡ್ ಟೈಮ್ ನಲ್ಲಿಯೇ ರೋಗಿಗಳು ಪರದಾಟ ನಡೆಸುವಂತಾಗಿದ್ದು, ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇನ್ನೊಂದೆಡೆ ಸಿಬ್ಬಂದಿಗಳು ಕೆಲಸ ಮಾಡದೆ ಸೈಲೆಂಟ್ ಪ್ರತಿಭಟನೆ ನಡೆಸುತ್ತಿದ್ದಾರೆ.
ಬೆಂಗಳೂರಿನ ಜಯನಗರ ಆಸ್ಪತ್ರೆಯಲ್ಲಿಯೇ ರೋಗಿಗಳು ಪರದಾಟ ನಡೆಸುವಂತಾಗಿದೆ. ಆಸ್ಪತ್ರೆ ತುಂಬಾ ರೋಗಿಗಳಿದ್ದು, ಹೌಸ್ ಫುಲ್ ಆಗಿದೆ. ಆದರೆ, ಚಿಕಿತ್ಸೆ ಸಿಗದೆ ಕಂಗಾಲಾಗಿದ್ದಾರೆ. ಇದು ಜಯನಗರ ಸರ್ಕಾರಿ ಆಸ್ಪತ್ರೆಯಲ್ಲಿನ ಕರ್ಮಕಾಂಡ ಎಂದು ರೋಗಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಎಲ್ಲ ಸೌಕರ್ಯಗಳಿದ್ದರೂ ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿಲ್ಲ.
ಜಯನಗರ ಆಸ್ಪತ್ರೆಯಲ್ಲಿ ನರ್ಸ್ ಇದ್ದಾರೆ. ಸ್ಕ್ಯಾನಿಂಗ್ ಸೆಂಟರ್ ಇದೆ. ಓಪಿಡಿ ಸ್ಲಿಪ್ ಕೊಡುವ ಸಿಬ್ಬಂದಿಗಳು ಮಾತ್ರ ಇಲ್ಲ. ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಗಣಕಯಂತ್ರ ಸಿಬ್ಬಂದಿಗೆ ಕಳೆದ ನಾಲ್ಕು ತಿಂಗಳುಗಳಿಂದ ಸಂಬಳ ನೀಡಿಲ್ಲ. ಬಸ್ ಗೆ ಬರಲೂ ಅವರ ಬಳಿ ಹಣ ಇಲ್ಲ. ಹೀಗಾಗಿ ಕೆಲಸ ಸ್ಥಗಿತ ಮಾಡಿ ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ರೋಗಿಗಳು ಪರದಾಡುವ ಸ್ಥಿತಿ ಎದುರಾಗಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕಿದೆ ಎಂದು ಸಾರ್ವಜನಿಕರು ಮನವಿ ಮಾಡುತ್ತಿದ್ದಾರೆ.


















