ಆಟೋ ಚಾಲಕನಿಗೆ ಹೊರ ರಾಜ್ಯದ ಯುವತಿಯೋರ್ವಳು ಚಪ್ಪಲಿಯಲ್ಲಿ ಹೊಡೆದಿರುವ ಘಟನೆ ನಡೆದಿದೆ.
ಬೆಂಗಳೂರಿನ ಬೆಳ್ಳಂದೂರು ಸರ್ಕಲ್ ನಲ್ಲಿ ಇಂದು ಸಂಜೆ ಈ ಘಟನೆ ನಡೆದಿದೆ. ಗಾಡಿ ಟಚ್ ಆಗಿದೆ ಎಂಬ ವಿಚಾರಕ್ಕೆ ಶುರುವಾದ ಜಗಳ ಅತಿರೇಕಕ್ಕೆ ಹೋದ ಪರಿಣಾಮ ಯುವತಿ ಕಿರಿಕ್ ಮಾಡಿ ಚಪ್ಪಲಿಯಲ್ಲಿ ಹೊಡೆದಿದ್ದಾಳೆ ಎನ್ನಲಾಗಿದೆ.
ಹೊರ ರಾಜ್ಯದ ಯುವತಿ ಚಪ್ಪಲಿ ತೆಗೆದು ಹೊಡೆದ ವಿಡಿಯೋ ಚಾಲಕನ ಮೊಬೈಲ್ ನಲ್ಲಿ ರೆಕಾರ್ಡ್ ಆಗಿದೆ. ಯುವತಿ ಸ್ಕೂಟರ್ ನಲ್ಲಿ ಬರುತ್ತಿದ್ದ ವೇಳೆ ಆಟೋ ಟಚ್ ಆಗಿದೆ. ಆಗ ಆಟೋ ಚಾಲಕ ಮತ್ತು ಯುವತಿಯ ಮಧ್ಯೆ ಗಲಾಟೆ ನಡೆದಿದೆ. ಕೋಪದ ಭರದಲ್ಲಿ ಯುವತಿ ಚಪ್ಪಲಿಯಿಂದ ಹೊಡೆದು ದರ್ಪ ಮೆರೆದಿದ್ದಾಳೆ. ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.