ಬೆಂಗಳೂರು: ಕನ್ನಡ ಭಾಷೆಯ ಉಗಮದ ಬಗ್ಗೆ ಕೀಳಾಗಿ ಮಾತನಾಡಿರುವ ಹಿರಿಯ ನಟ ಕಮಲ್ ಹಾಸನ್ (Kamal Haasan) ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ವಿಚಾರವಾಗಿ ಈಗ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಮಾತನಾಡಿದ್ದಾರೆ.
‘ತಮಿಳಿನಿಂದಲೇ ಕನ್ನಡದ ಜನನವಾಗಿದೆ’ ಎಂದು ಕಮಲ್ ಹೇಳಿಕೆ ನೀಡಿದ್ದರು. ಹೀಗಾಗಿ ದ್ರಾವಿಡ ಭಾಷೆಗಳ ಉಗಮದ ಚಾರ್ಟ್ ನ್ನು ಹಂಚಿಕೊಂಡಿದ್ದಾರೆ. ಅದರಂತೆ ದ್ರಾವಿಡ ಭಾಷೆಯ ಮೂಲಕವೇ ಕನ್ನಡ, ತೆಲುಗು. ತಮಿಳು ಹಾಗೂ ಮಲಯಾಳಂ ಸೇರಿದಂತೆ ಹಲವು ಭಾಷೆಗಳು ಹುಟ್ಟಿವೆ.
ನಮ್ಮ ಭಾಷೆಗಳು ಪರಸ್ಪರ ಸಾಮ್ಯತೆಗಳನ್ನು ಹೊಂದಿವೆ. ಯಾವ ಭಾಷೆಯೂ ಇನ್ನೊಂದು ಭಾಷೆಗಿಂತಲೂ ಶ್ರೇಷ್ಠ ಎಂದಿಲ್ಲ. ಕೆಲವರು ಸಂಸ್ಕೃತ ಎಲ್ಲ ಭಾಷೆಗಳ ತಾಯಿ ಎಂದುಕೊಂಡಿರುವವರು ಇದ್ದಾರೆ. ಸಂಸ್ಕೃತ ಇಂಡೋ-ಆರ್ಯನ್ ಭಾಷೆ. ಆದರೆ ನಾವು ದ್ರಾವಿಡರು. ಇಂಡೋ ಆರ್ಯನ್ನರು ಇಲ್ಲಿಗೆ ವಲಸೆ ಬರುವುದಕ್ಕೆ ಬಹಳ ವರ್ಷಗಳ ಮುಂಚೆಯೇ ನಾವು ಇಲ್ಲಿದ್ದೀವಿ’ ಎಂದು ರಮ್ಯಾ ಹೇಳಿದ್ದಾರೆ. ನಾವುಗಳು ಒಟ್ಟಾಗಿ ಹಿಂದಿ ಹೇರಿಕೆ ವಿರುದ್ಧ ಹೋರಾಡಬೇಕು ಆದರೆ ಅದಕ್ಕೂ ಮುನ್ನ ನಾವು ಪರಸ್ಪರರಿಗೆ ಗೌರವ ಕೊಡುವುದನ್ನು ಕಲಿಯಬೇಕಿದೆ’ ಎಂದು ರಮ್ಯಾ ಕರೆ ನೀಡಿದ್ದಾರೆ.


















