ಮಂಗಳೂರು: ಬಂಟ್ವಾಳದಲ್ಲಿ ನಡೆದ ಅಬ್ದುಲ್ ರಹೀಂ ಬರ್ಬರ ಹತ್ಯೆಯನ್ನು ಖಂಡಿಸಿ ಮಂಗಳೂರಿನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ನಗರದ ಕೈಕಂಬದಲ್ಲಿ ಶವ ಮೆರವಣಿಗೆ ವೇಳೆ ಬಲವಂತವಾಗಿ ಬೈಕ್ ಶೋರೂಂ ಬಂದ್ ಮಾಡಿಸಲಾಗಿದೆ. ಶವ ಮೆರವಣಿಗೆಯ ಸಂದರ್ಭದಲ್ಲಿ ಶೋರೂಂ ತೆರೆದಿರುವುನ್ನು ನೋಡಿ ಕೆಲ ಮುಸ್ಲಿಂ ಯುವಕರು ಬಂದ್ ಮಾಡುವಂತೆ ಆಗ್ರಹಿಸಿದ್ದಾರೆ. ಈ ವೇಳೆ ಬಂದ್ ಮಾಡಲು ಶೋರೂಂ ಸಿಬ್ಬಂದಿ ಒಪ್ಪಿಗೆ ನೀಡಿರುವುದಿಲ್ಲ. ಇದಕ್ಕೆ ಸಿಟ್ಟಾದ ಯುವಕರು ಶೋರೂಂನ ಮುಂದೆ ಅಳವಡಿಸಿದ್ದ ಗಾಜಿನ ಮೇಲೆ ಕಲ್ಲು ಎಸೆದು ಗಲಾಟೆ ಮಾಡಿದ್ದಾರೆ. ಬಳಿಕ ಒತ್ತಾಯ ಪೂರ್ವಕವಾಗಿ ಶಟರ್ ಹಾಕಿಸಿದ್ದಾರೆ. ಬಳಿಕ ಪೊಲೀಸರು ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.



















