ಬೆಂಗಳೂರು: ಹೈಸ್ಕೂಲ್ ಗೆಳೆಯನಿಗಾಗಿ ಬಂದಿದ್ದ ಪೊಲೀಸಪ್ಪನ ಪತ್ನಿ ಹೆಣವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.
ಸಬ್ ಇನ್ಸ್‌ಪೆಕ್ಟರ್ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಈ ಘಟನೆ ನಗರದ ಹೆಚ್‌ಬಿಆರ್ ಬಡಾವಣೆಯಲ್ಲಿ (HBR Layout) ನಡೆದಿದೆ. ಕೆ.ಜಿ.ಹಳ್ಳಿ ಸಬ್ ಇನ್ಸ್ಪೆಕ್ಟರ್ ನಾಗರಾಜ್ (KG halli PSI Nagaraj )ಪತ್ನಿ ಶಾಲಿನಿ (Shalini) ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಎನ್ನಲಾಗಿದೆ.
ಕೆ.ಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿರುವ ನಾಗರಾಜ್ ಅವರನ್ನು ಮದುವೆಯಾಗಲು ಶಾಲಿನಿ ಮೊದಲ ಪತಿಗೆ ವಿಚ್ಛೇದನ ನೀಡಿದ್ದಳು. ಮೃತ ಶಾಲಿನಿ ಮತ್ತು ಪಿಎಸ್ಐ ನಾಗರಾಜ್ ಇಬ್ಬರೂ ಇಳಕಲ್ ಮೂಲದವರು. ಹೈಸ್ಕೂಲ್‌ನಲ್ಲಿ ಟ್ಯೂಷನ್‌ಮೆಟ್ಸ್ ಆಗಿದ್ದರು. ನಂತರ ಶಾಲಿನಿ MSc ಹಾಗೂ ನಾಗರಾಜ್ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದರು.
ನಾಗರಾಜ್ ಬೆಂಗಳೂರಿನಲ್ಲಿ ಪಿಎಸ್‌ಐ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಶಾಲಿನಿ ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಇಬ್ಬರ ಮಧ್ಯೆ ಸ್ನೇಹ ಬೆಳೆದು ಅದು ಪ್ರೀತಿಯಾಗಿ ಬದಲಾಗಿದೆ. ಆಗ ಶಾಲಿನಿ, ಡಿವೋರ್ಸ್ ನೀಡಿ ನಾಗರಾಜ್ನನ್ನು 2ನೇ ಮದುವೆಯಾಗಿದ್ದು. ಸದ್ಯ ಮೃತ ಶಾಲಿನಿಗೆ 7 ವರ್ಷದ ಮಗು ಇದೆ.
ಆದರೆ, ಇತ್ತೀಚೆಗೆ ಶಾಲಿನಿ, ನಾಗರಾಜ್ ದಾಂಪತ್ಯದಲ್ಲಿ ಬಿರುಕು ಉಂಟಾಗಿದೆ ಎನ್ನಲಾಗಿದೆ. ಇದರಿಂದ ಬೇಸತ್ತು ನಾಗರಾಜ್ ಬೇರೆಡೆ ವಾಸವಿದ್ದ. ಇತ್ತ ಪತಿ ಮನೆಗೆ ಬರುತ್ತಿಲ್ಲವೆಂದು ಕೋಪಗೊಂಡ ಶಾಲಿನಿ ರೈಲಿಗೆ ಸಿಲುಕಿ ಸಾಯಲು ಯತ್ನಿಸಿದ್ದಳು ಎನ್ನಲಾಗಿದೆ. ಆದರೆ, ಪೊಲೀಸರು ರಕ್ಷಿಸಿ ಮನೆಗೆ ಬಿಟ್ಟಿದ್ದರು. ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಈ ಕುರಿತು ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.