ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬೇಲ್ ಸಿಕ್ಕಿದ ನಂತರ ನಟ ದರ್ಶನ್ ಡೆವಿಲ್ ಶೂಟ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಅಭಿಮಾನಿಗಳಂತೂ ಬಾಸ್ ಸಿನಿಮಾ ಯಾವಾಗ ರಿಲೀಸ್ ಆಗುತ್ತೋ? ಅಂತ ಕಾತುರದಿಂದ ಕಾಯುತ್ತಿದ್ದಾರೆ.
ಇವತ್ತಿಗೆ ದರ್ಶನ್ ಅವರು ವಿಜಯಲಕ್ಷ್ಮಿಯನ್ನು ಮದುವೆಯಾಗಿ 22 ವರ್ಷ ಕಳೆದಿವೆ. ಹೌದು.. ದರ್ಶನ್ ಹಾಗೂ ವಿಜಯಲಕ್ಷ್ಮಿ 2003ರ ಮೇ 19ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ದರ್ಶನ್ ಮದುವೆಯ ಆಮಂತ್ರಣ ಪತ್ರ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
‘ದರ್ಶನ್ ಅವರ ವಿವಾಹ ಆಮಂತ್ರಣ ಪತ್ರದಲ್ಲಿ 19-05-2003ರ ಸೋಮವಾರ ಬೆಳಿಗ್ಗೆ 9:10ರಿಂದ 9:50ರವರೆಗಿನ ಮಿಥುನ ಲಗ್ನದಲ್ಲಿ ನಾವು ವಿವಾಹವಾಗುತ್ತಿದ್ದೇವೆ. ಧರ್ಮಸ್ಥಳದ ವಸಂತ್ ಮಹಲ್ನಲ್ಲಿ ಮದುವೆ ನಡೆಯಲಿದೆ. ಎಲ್ಲರೂ ಮದುವೆಗೆ ಆಗಮಿಸಬೇಕು ಎಂದು ಆಮಂತ್ರಣ ಕೋರುತ್ತಿದ್ದೇನೆ’ ಎಂದು ಬರೆದಿರುವುದಿದೆ.
ದರ್ಶನ್ ಹಾಗೂ ವಿಜಯಲಕ್ಷ್ಮಿ ದಾಂಪತ್ಯದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ. ಇದೀಗ ಎಲ್ಲವನ್ನು ನಿವಾರಿಸಿಕೊಂಡು ಸುಖ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ. ಇತ್ತೀಚೆಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ದರ್ಶನ್ ದಂಪತಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆಗ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದರು.