ಬೆಂಗಳೂರು: ಬೆಂಗಳೂರಿನಲ್ಲಿರುವ ಗವರ್ನ್ ಮೆಂಟ್ ಫ್ಲೈಯಿಂಗ್ ಟ್ರೈನಿಂಗ್ ಸ್ಕೂಲ್ ನಲ್ಲಿ ಹಲವು ಹುದ್ದೆಗಳು ಖಾಲಿ ಇದ್ದು, ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಚೀಫ್ ಫ್ಲೈಯಿಂಗ್ ಇನ್ ಸ್ಟ್ರಕ್ಟರ್, ಚೀಫ್ ಏರ್ ಕ್ರಾಫ್ಟ್ ಮೆಂಟೇನನ್ಸ್ ಎಂಜಿನಿಯರ್ ಸೇರಿ ಹಲವು ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಮೇ 23 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಅಭ್ಯರ್ಥಿಗಳು ಇ-ಮೇಲ್ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಂಚೆ ಮೂಲಕ ಅರ್ಜಿ ಸಲ್ಲಿಸುವವರು ಸರ್ಕಾರಿ ವೈಮಾನಿಕ ತರಬೇತಿ ಶಾಲೆ, ಜಕ್ಕೂರು ವಿಮಾನ ನಿಲ್ದಾಣ, ಯಲಹಂಕ ಅಂಚೆ, ಬೆಂಗಳೂರು – 560064 ವಿಳಾಸಕ್ಕೆ ಕಳುಹಿಸಬಹುದು. ಇ-ಮೇಲ್ ಮೂಲಕ gfts.kar@gmail.comಗೆ ಕಳುಹಿಸಬಹುದಾಗಿದೆ. ನೇಮಕಾತಿ ಹೊಂದಿದವರು ಜಕ್ಕೂರಿನಲ್ಲಿರುವ ಟ್ರೈನಿಂಗ್ ಸ್ಕೂಲ್ ನಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ.
ಚೀಫ್ ಫ್ಲೈಯಿಂಗ್ ಇನ್ ಸ್ಟ್ರಕ್ಟರ್- 1
ಚೀಫ್ ಏರ್ ಕ್ರಾಫ್ಟ್ ಮೆಂಟೇನನ್ಸ್ ಎಂಜಿನಿಯರ್- 2
ಫ್ಲೈಟ್ ಇನ್ ಸ್ಟ್ರಕ್ಟರ್- 1
ಸೇಫ್ಟಿ ಮ್ಯಾನೇಜರ್- 1
ಚೀಫ್ ಫ್ಲೈಯಿಂಗ್ ಇನ್ ಸ್ಟ್ರಕ್ಟರ್ ಹುದ್ದೆಗೆ ನೇಮಕಗೊಂಡವರಿಗೆ ಮಾಸಿಕ 3.5 ಲಕ್ಷ ರೂ. ಸಂಬಳ ಇರಲಿದೆ. ಇನ್ನು ಚೀಫ್ ಏರ್ ಕ್ರಾಫ್ಟ್ ಮೆಂಟೇನನ್ಸ್ ಎಂಜಿನಿಯರ್ ಹುದ್ದೆಗೂ 3.5 ಲಕ್ಷ ರೂ. ವೇತನ ಇದೆ. ಫ್ಲೈಟ್ ಇನ್ ಸ್ಟ್ರಕ್ಟರ್ ಹುದ್ದೆಗೆ ಆಯ್ಕೆಯಾದವರಿಗೆ ಮಾಸಿಕ 1.6 ಲಕ್ಷ ರೂ. ವೇತನ ನೀಡಲಾಗುತ್ತದೆ. ಸೇಫ್ಟಿ ಮ್ಯಾನೇಜರ್ ಹುದ್ದೆಗೆ ನೇಮಕಗೊಂಡವರಿಗೆ ಮಾಸಿಕ 22,800 ರೂ. ಸಂಬಳ ಇದೆ.
ಆಯಾ ಹುದ್ದೆಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ. ಮೂರು ವರ್ಷಗಳವರೆಗೆ ಗುತ್ತಿಗೆ ಆಧಾರದ ಮೇಲೆ ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಗರಿಷ್ಠ 62 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದಾಗಿದೆ. ಕಾರ್ಯಾನುಭವ ಇದ್ದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.