ಬೆಂಗಳೂರು: ಯುವಕನೋರ್ವ ನಗರದಲ್ಲಿ ಪಾಕ್ ಪರ ಘೋಷಣೆ ಮಾಡಿರುವ ಘಟನೆ ನಡೆದಿದೆ.
ಶುಭಾಂಶು ಶುಕ್ಲಾ (26) ಬಂಧಿತ ಆರೋಪಿ ಎನ್ನಲಾಗಿದೆ. ವೈಟ್ ಫೀಲ್ಡ್ ನ ಪ್ರಶಾಂತ್ ಲೇಔಟ್ ನ ಪಿಜಿ ನಲ್ಲಿ ಈ ಘಟನೆ ನಡೆದಿದೆ. ವೈಟ್ ಫೀಲ್ಡ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮೇ 9ರಂದು ರಾತ್ರಿ 12.30ಕ್ಕೆ ಈ ಘಟನೆ ನಡೆದಿದೆ. ಅಕ್ಕ ಪಕ್ಕದವರಿಗೆ ಭಯ ಹುಟ್ಟಿಸಿತ್ತು. ಛತ್ತೀಸ್ ಗಢ ಮೂಲದ ಆರೋಪಿ ಶುಭಾಂಶು ಶುಕ್ಲಾ ಬೆಂಗಳೂರಿನಲ್ಲಿ ಟೆಕ್ಕಿ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ವೈಟ್ ಫೀಲ್ಡ್ ನ ಪ್ರಶಾಂತ್ ಲೇಔಟ್ ನಲ್ಲಿ ಪಿಜಿಯಲ್ಲಿ ವಾಸ ಮಾಡುತ್ತಿದ್ದ. ‘ಆಪರೇಷನ್ ಸಿಂಧೂರ್’ ಸಕ್ಸಸ್ ಸಂಭ್ರಮಿಸುತ್ತಿದ್ದ ಸಂದರ್ಭದಲ್ಲಿ ಪಾಕ್ ಪರ ಘೋಷಣೆ ನಡೆದಿತ್ತು. ಆಗ ಆರೋಪಿಯು ಪಿಜಿಯೊಂದರ ಬಾಲ್ಕನಿಗೆ ಬಂದು ಘೋಷಣೆ ಕೂಗಿದ್ದ. ಆಗ ಪಿಜಿಯ ಯುವಕರು ಉಗ್ರರೇ ಬಂದಿದ್ದರು ಎಂದು ಹೆದರಿದ್ದ.
ಹೊರಬಂದು ನೋಡಿದಾಗ ಬಾಲ್ಕನಿಯಲ್ಲಿ ಆರೋಪಿ ನಿಂತಿದ್ದ. ಆತ ಕೂಗಿದ್ದನ್ನು ಯುವಕರು ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡಿದ್ದರು. ಬಳಿಕ 112 ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದು ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ಕರೆದೊಯ್ದಿದ್ದರು. ವೀಡಿಯೊ ಪರಿಶೀಲನೆ ವೇಳೆ ಶುಭಾಂಶು ಪಾಕ್ ಪರ ಘೋಷಣೆ ಕೂಗಿರುವುದು ದೃಢವಾಗಿತ್ತು. ಸದ್ಯ ಆರೋಪಿ ಬಂಧಿಸಿರುವ ಪೊಲಸರು ಜೈಲಿಗೆ ಅಟ್ಟಿದ್ದಾರೆ.