ಕಳೆದ ನಾಲ್ಕೈದು ದಿನಗಳಿಂದ ಭಾರತ ಹಾಗೂ ಪಾಕಿಸ್ತಾನದ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಗೆಲುವು ಸಾಧಿಸಿರುವುದು ನಾವೇ ಎಂದು ಉದ್ಧಟತನದ ಹೇಳಿಕೆಯನ್ನು ಪಾಕ್ ಪ್ರಧಾನಿ ಶಹಬಾಜ್ ಷರೀಫ್ ನೀಡಿದ್ದಾರೆ. ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಶಹಬಾಜ್ ಷರೀಫ್, ಕಳೆದ ನಾಲ್ಕೈದು ದಿನಗಳ ಸಂಘರ್ಷದಲ್ಲಿ ಭಾರತಕ್ಕೆ ಸರಿಯಾದ ಪಾಠವನ್ನು ನಾವು ಕಲಿಸಿದ್ದೇವೆ. ಸದ್ಯದ ಪರಿಸ್ಥಿತಿಯಲ್ಲಿ ಗೆದ್ದಿರುವುದು, ಗೆಲುವು ಸಾಧಿಸಿರುವುದು ನಾವೇ ಎಂದಿದ್ದಾರೆ.



















