ಸಿಎಂ ಸಿದ್ದರಾಮಯ್ಯಗೆ ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಪತ್ರ ಬರೆದು, ಜಾತಿ ಜನಗಣತಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನ್ಯೂನತೆಗಳು ಸರಿ ಪಡಿಸುವಂತೆ ಮನವಿ ಮಾಡಿದೆ.
ಜಾತಿ ಗಣತಿಯನ್ನು ಮತ್ತೊಮ್ಮೆ ನಡೆಸುವಂತೆ ಸಿಎಂಗೆ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಒತ್ತಾಯ ಮಾಡಿದೆ. ಒಕ್ಕಲಿಗರ ಜನಸಂಖ್ಯೆಯನ್ನು ಸರಿಯಾಗಿ ಸಮೀಕ್ಷೆ ಮಾಡಿಲ್ಲ. ಕಡಿಮೆ ಜನಸಂಖ್ಯೆ ತೋರಿಸಲಾಗಿದೆ. ಕಾಂತರಾಜ್ ವರದಿ ಪಾರದರ್ಶಕವಾಗಿಲ್ಲ. 10 ವರ್ಷಗಳ ಮೌಲ್ಯಾಂಕಗಳನ್ನು ಬಳಸಲಾಗಿದೆ. ಕಾಂತರಾಜ್ ವರದಿ ಅವೈಜ್ಞಾನಿಕವಾಗಿದೆ. ಹೊಸದಾಗಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸುವುದು ಸೂಕ್ತ ಎಂದು ಮನವಿ ಮಾಡಿದೆ.