ಹಿರಿಯ ಪೊಲೀಸ್ ಅಧಿಕಾರಿ ಮಕ್ಕಳ ಜೊತೆ ಕಿರಿಕ್ ಮಾಡಿದ್ದ ದಂಪತಿ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.
ಎಡಿಜಿಪಿ ದರ್ಜೆ ಅಧಿಕಾರಿ ಮಕ್ಕಳ ಜೊತೆ ದಂಪತಿ ಐಪಿಎಲ್ ಪಂದ್ಯದ ವಿಚಾರವಾಗಿ ಕಿರಿಕ್ ಮಾಡಿಕೊಂಡಿದ್ದರು ಎನ್ನಲಾಗಿದೆ.
RCB- CSK ಮ್ಯಾಚ್ ಸಂದರ್ಭದಲ್ಲಿ ಈ ಕಿರಿಕ್ ನಡೆದಿದೆ. ಚಿನ್ನಸ್ವಾಮಿ ಸ್ಟೇಡಿಯಂನ ಡೈಮಂಡ್ ಬಾಕ್ಸ್ ನಲ್ಲಿ ಸೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿ ಪುತ್ರ, ಪುತ್ರಿ ಜೊತೆ ಆದಾಯ ತೆರಿಗೆ ಇಲಾಖೆ ದಂಪತಿ ಕಿರಿಕ್ ಮಾಡಿದ್ದಾರೆ ಎನ್ನಲಾಗಿದೆ.
ಅವಾಚ್ಯ ಪದ ಬಳಕೆ, ಬೆದರಿಕೆ ಹಾಕಿ, ಅಸಭ್ಯವಾಗಿ ವರ್ತಿಸಿದ್ದಾರೆಂದು ತಾಯಿ ದೂರು ದಾಖಲಿಸಿದ್ದಾರೆ. ತಮ್ಮ ಮಗಳನ್ನ ಮುಟ್ಟಿ ಅಸಭ್ಯ ವರ್ತನೆ ತೋರಿದ್ದಾರೆಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತು ಎಫ್ ಐಆರ್ ದಾಖಲಾಗಿದೆ.