ಬೆಂಗಳೂರು: ನಗರದ ಪ್ರತಿಷ್ಠಿತ ಎಚ್ ಎಸ್ ಆರ್ ಬಡಾವಣೆಯಲ್ಲಿ ಅಕ್ರಮ ಪಿಜಿಗಳ ಅಡ್ಡೆಯಲ್ಲಿ ಅನಾಗರಿಕ ವರ್ತನೆಯನ್ನು ಯುವಕ- ಯುವತಿಯರು ತೋರುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಹಾಡುಹಗಲೇ ನಶೆಯಲ್ಲಿ ನಗ್ನವಾಗಿ ಓಡಾಟ ನಡೆಸುತ್ತಾರೆ. ಹಾಡುಹಗಲೇ ನಡುರಸ್ತೆಯಲ್ಲಿ ನಗ್ನವಾಗಿ ಯುವತಿಯರು ಓಡಾಡುತ್ತಾರೆ. ಅರೆನಗ್ನವಾಗಿ ನಡುಬೀದಿಯಲ್ಲಿ ಪಿಜಿ ವಾಸಿಗಳು ರೋಮ್ಯಾನ್ಸ್ ಮಾಡುತ್ತಾರೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಹಣಕ್ಕಾಗಿ ತಲೆಯೆತ್ತಿರುವ ಪಿಜಿಗಳ ವಿರುದ್ಧ ಸಂಬಂಧಪಟ್ಟವರು ಕ್ರಮ ಕೈಗೊಳ್ಳುತ್ತಿಲ್ಲ. ಈ ಕುರಿತು ಬಿಬಿಎಂಪಿ, ಬೆಸ್ಕಾಂ ಮತ್ತು ಪೊಲೀಸ್ ಇಲಾಖೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.