ಬೆಂಗಳೂರು: ಬಿಬಿಎಂಪಿ ಮುಖ್ಯ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಮಹೇಶ್ವರ ರಾವ್ ಗೆ ಬಿಬಿಎಂಪಿಯ ಸಂಪೂರ್ಣ ಹೊಣೆ ನೀಡಲಾಗಿದೆ.
ಬಿಬಿಎಂಪಿಯ ಮುಖ್ಯ ಆಯುಕ್ತರಾಗಿ ಪೂರ್ಣ ಅಧಿಕಾರ ವಹಿಸಿಕೊಂಡಿದ್ದಾರೆ. ಮಹೇಶ್ವರ ರಾವ್ ಅವರು ಈ ಹಿಂದೆ BMRCL ಎಂಡಿ ಆಗಿದ್ದರು. ಈಗ ಬಿಬಿಎಂಪಿಯ ಕಮಿಷನರ್ ಆಗಿ ಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಬಿಬಿಎಂಪಿ ಮುಖ್ಯ ಆಯುಕ್ತರಾಗಿ ಮಹೇಶ್ವರ ರಾವ್ ಅಧಿಕಾರ ವಹಿಸಿಕೊಂಡಿದ್ದರೂ ಅವರಿಗೆ ಬಿಎಂಆರ್ ಸಿಎಲ್ ಹೆಚ್ಚುವರಿ ಜವಾಬ್ದಾರಿ ನೀಡಲಾಗಿತ್ತು. ಇದಕ್ಕೆ ಸಂಸದ ಪಿ.ಸಿ. ಮೋಹನ್ ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ಸರ್ಕಾರ, ಬಿಬಿಎಂಪಿಯ ಸಂಪೂರ್ಣ ಅಧಿಕಾರ ನೀಡಿ ಆದೇಶ ಹೊರಡಿಸಿದೆ. ಹೀಗಾಗಿ ಬಿಬಿಎಂಪಿಯ ಸಂಪೂರ್ಣ ಜವಾಬ್ದಾರಿ ಮಹೇಶ್ವರ ರಾವ್ ಗೆ ಬಿದ್ದಿದೆ.


















