ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು, ಓರ್ವ ವ್ಯಕ್ತಿ ಬಲಿಯಾಗಿದ್ದಾರೆ.
ವ್ಯಾಪಕ ಮಳೆಯಿಂದಾಗಿ ಆಟೋದ ಮೇಲೆ ಮರ ಬಿದ್ದಿದ್ದು, 45 ವರ್ಷದ ಮಹೇಶ್ ಸಾವನ್ನಪ್ಪಿದ್ದಾರೆ. ಇಂದು ಸಂಜೆ ಈ ಘಟನೆ ನಡೆದಿದೆ.
ಸಿಲಿಕಾನ್ ಸಿಟಿಯ ಕೆಲವೆಡೆ ಇಂದು ಧಾರಾಕಾರವಾಗಿ ಮಳೆ ಸುರಿದಿದ್ದು, ಒಂದೇ ಮಳೆಗೆ ಭಾಗಶಃ ಬೆಂಗಳೂರು ಮುಳುಗಿದೆ. ನಾಗರಬಾವಿ ಫ್ಲೈ ಓವರ್ ಹಾಗೂ ಸರ್ಕಲ್ ಸಂಪೂರ್ಣ ಜಲಾವೃತಗೊಂಡಿದೆ. ಮೊಣಕಾಲಿನವರೆಗೆ ನಿಂತ ನೀರಿನಿಂದಾಗಿ ವಾಹನ ಸವಾರರು ಪರದಾಟ ನಡೆಸುವಂತಾಗಿದೆ.
ಮಳೆ ನೀರಿಗೆ ಅರ್ಧದಲ್ಲೇ ಕಾರು ನಿಂತು ಫಜೀತಿ ಅನುಭವಿಸುವಂತಾಗಿತ್ತು. ಬೈಕ್ ಸವಾರರು ಕೆಲಹೊತ್ತು ಮಳೆಯ ನೀರಿನಲ್ಲಿ ಸಿಲುಕಿ ಪರದಾಟ ನಡೆಸಿದ್ದಾರೆ. ಹಲವರು ಮಳೆಯಲ್ಲೇ ಬೈಕ್ ತಳ್ಳಿಕೊಂಡು ಹೋಗಿದ್ದಾರೆ.
ಕೋರಮಂಗಲ ಬಳಿ ಕಾರಿನ ಮೇಲೆ ಮರ ಬಿದ್ದಿದೆ. ಕೋರಮಂಗಲ ಬಳಿಯ NBC ಕೆಫೆ ಬಳಿ ಕಾರು ಬಿದ್ದಿದೆ ಎನ್ನಲಾಗಿದೆ.


















