ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರ ಅಧಿಕಾರವಧಿ ನಾಳೆಗೆ ಅಧಿಕೃತವಾಗಿ ಅಂತ್ಯವಾಗುತ್ತಿದೆ. ಹೀಗಾಗಿ ಮುಂದಿನ ಡಿಜಿ-ಐಜಿಪಿ ಯಾರಾಗುತ್ತಾರೆ ಎನ್ನುವ ಕುತೂಹಲ ಆವರಿಸಿದೆ. ಹಾಗೆ ನೋಡಿದರೆ ನಿನ್ನೆಯೇ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ನೇತೃತ್ವದಲ್ಲಿ ಮೀಟಿಂಗ್ ನಡೆಯಬೇಕಿತ್ತು. ಆದರೆ ಬೆಳಗಾವಿ ಕಾರ್ಯಕ್ರಮ ತಡವಾದ ಕಾರಣ ಸಭೆಯನ್ನು ಇಂದಿಗೆ ಮುಂದೂಡಲಾಗಿದೆ.
ಈಗಾಗಲೇ ಮುಂದಿನ 4 ತಿಂಗಳ ಅವಧಿಗೆ ಸೇವೆಯನ್ನು ವಿಸ್ತರಿಸುವಂತೆ ಅಲೋಕ್ ಮೋಹನ್ ಸಿಎಂಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಆದರೆ ಇದಕ್ಕೆ ಸಿಎಂ ಕಡೆಯಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ ಎನ್ನಲಾಗುತ್ತಿದೆ. ಈ ನಡುವೆ, ಸೇವಾ ಹಿರಿತನದಲ್ಲಿ ಸಿಐಡಿ ಡಿಜಿಪಿ ಡಾ ಎಂ ಎ ಸಲೀಂ ಹಾಗೂ ಅಗ್ನಿಶಾಮಕ ದಳದ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ರೇಸ್ ನಲ್ಲಿದ್ದಾರೆ. ಈ ಇಬ್ಬರ ಪೈಕಿ ಯಾರಾಗ್ತಾರೆ ಬೆಂಗಳೂರು ಬಾಸ್ ಅನ್ನೋದು ಕುತೂಹಲ ಮೂಡಿಸಿದೆ.
ಹಾಗೆ ನೋಡಿದರೆ, ಸಲೀಂ ಕನ್ನಡಿಗರಾಗಿದ್ದು, ಮೂಲತ: ಬೆಂಗಳೂರಿನ ಚಿಕ್ಕಬಾಣವರ ಮೂಲದವರು. ಅಷ್ಟೇ ಅಲ್ಲಾ ಕನ್ನಡದ ಅಸ್ಮಿತೆ ಬಗ್ಗೆ ಸದಾ ಮಾತನಾಡೋ ಸಿಎಂ ಸಲೀಂರನ್ನು ಹುದ್ದೆಗೆ ನೇಮಿಸುವಂತೆ ಹಲವರು ಆಗ್ರಹಿಸಿದ್ದಾರೆ. ಇನ್ನು ಅಲ್ಪಸಂಖ್ಯಾತ ಸಮುದಾಯದ ಸಲೀಂ ಪರ ಹಲವು ಹಿರಿಯ ಮುಖಂಡರು ಕೂಡಾ ಬ್ಯಾಟ್ ಬೀಸುತ್ತಿದ್ದಾರೆ. ಇಂದು ಸಂಜೆಯೊಳಗಾಗಿ ನೂತನ ಡಿಜಿಪಿ-ಐಜಿ ನೇಮಕ ಬಹುತೇಕ ಪಕ್ಕಾ ಆಗಲಿದೆ.



















