ಉತ್ತಮ ಫಾರ್ಮ್ ನಲ್ಲಿರುವ ಮುಂಬೈ ಇಂಡಿಯನ್ಸ್ ತಂಡ(Mumbai Indians) ಲಕ್ನೋ ವಿರುದ್ಧ ಭರ್ಜರಿ ಜಯ ಸಾಧಿಸಿದೆ.
ಈ ಗೆಲುವಿನ ಮೂಲಕ ಮುಂಬೈ ತಂಡ ಸತತ 5ನೇ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಲಕ್ನೋ ವಿರುದ್ಧ 54 ರನ್ ಗಳ ಜಯ ಕಂಡಿದೆ. ಸೂರ್ಯ ಕುಮಾರ್ ಯಾದವ್ (Suryakumar Yadav) ಮತ್ತು ರಯಾನ್ ರಿಕಲ್ಟನ್ ಅರ್ಧ ಶತಕ ಗಳಿಸಿದರೆ, ಜಸ್ಪ್ರೀತ್ ಬುಮ್ರಾ, ಬೌಲ್ಟ್ ಮತ್ತು ವಿಲ್ ಜಾಕ್ಸ್ ಲಕ್ನೋ ತಂಡ ಕಟ್ಟಿ ಹಾಕಿದರು. ಈ ಮೂಲಕ ಮುಂಬೈ ಐಪಿಎಲ್‌ನಲ್ಲಿ 150 ಪಂದ್ಯಗಳನ್ನು ಗೆದ್ದ ಮೊದಲ ತಂಡವಾಗಿದೆ.
ಮುಂಬೈ ಪರ ರಯಾನ್ ರಿಕಲ್ಟನ್ (58) ಮತ್ತು ವಿಲ್ ಜ್ಯಾಕ್ಸ್ (29), ಸೂರ್ಯಕುಮಾರ್ ಯಾದವ್ (54) ರನ್ ಗಳಿಸಿ ಐಪಿಎಲ್‌ನಲ್ಲಿ ಅತಿ ಕಡಿಮೆ ಎಸೆತಗಳಲ್ಲಿ 4000 ರನ್ ಗಳನ್ನು ಪೂರ್ಣಗೊಳಿಸಿದರು. ಪರಿಣಾಮ ಮುಂಬೈ ತಂಡ 215 ರನ್ ಗಳಿಸಿತು. ಲಕ್ನೋ ಪರ ಮಯಾಂಕ್ 2 ವಿಕೆಟ್ ಪಡೆದರು.
ಲಕ್ನೋ ತಂಡಕ್ಕೆ ಆರಂಭದಿಂದಲೂ ಆಘಾತ ಎದುರಾಯಿತು. ಮಿಚೆಲ್ ಮಾರ್ಷ್ (34) ಮತ್ತು ನಿಕೋಲಸ್ ಪೂರನ್ (27) ಲಕ್ನೋ ಪರ ಇನ್ನಿಂಗ್ಸ್ ಕಟ್ಟುವ ಕೆಲಸ ಮಾಡಿದರು. ಮುಂಬೈ ಪರ ಜಸ್ಪ್ರೀತ್ ಬುಮ್ರಾ 4 ವಿಕೆಟ್ ಪಡೆದು ಮಿಂಚಿದರು.



















