ಅದು ಅಕ್ಟೋಬರ್ 7…2023…ಅಂದು ಗಾಜಾ ಪಟ್ಟಿಯ ಮೇಲೆ ಹಮಾಸ್ ಉಗ್ರರು ದ್ವೇಷದ ಸಮರ ಸಾರಿದ್ದರು. ನಿರಂತರ ಕ್ಷಿಪಣಿ ದಾಳಿ ನಡೆಸಿದ್ದ ಹಮಾಸ್, ಇಸ್ರೇಲ್ ನ ಜಂಗಾಬಲವನ್ನೇ ಪುಡಿ ಮಾಡುವ ಹುನ್ನಾರಕ್ಕೆ ಮುಂದಾಗಿದ್ದರು. ಅವತ್ತಿನ ಈ ದಾಳಿಯಲ್ಲಿ 1400ಕ್ಕೂ ಹೆಚ್ಚು ಮಂದಿ ಪ್ರಾಣತೆತ್ತಿದ್ದರು. ಅಂದಿನ ಈ ಘಟನೆಯನ್ನೇ ಯಥಾವತ್ ಕಾರ್ಯರೂಪಕ್ಕೆ ತರುವ ನೀಲನಕ್ಷೆ ಸಿದ್ಧವಾಗಿತ್ತಾ. ಭಾರತದಲ್ಲಿ ಇಸ್ರೇಲ್ ನ ರಾಯಬಾರ ಕಚೇರಿ ಅಧಿಕಾರಿಯಾಗಿರುವ ರಿಯೂನ್ ಅಜರ್, ಅಂದು ಇಸ್ರೇಲ್ ಮೇಲೆ ನಡೆದ ಹಮಾಸ್ ದಾಳಿಯನ್ನೇ ಹೋಲುವಂತಿದೆ ಪಹಲ್ಗಾಮ್ ಅಟ್ಯಾಕ್ ಎಂದಿದ್ದಾರೆ.
ಜೈಶ್ ಉಗ್ರ ಶಿಬಿರಕ್ಕೆ ಹಮಾಸ್ ನಾಯಕರ ಭೇಟಿ
ಅಜರ್ ಹೇಳಿಕೆ ಬೆನ್ನಲ್ಲೇ ಮತ್ತಷ್ಟು ಆಘಾತಕಾರಿ ಅಂಶಗಳೀಗ ಬಯಲಿಗೆ ಬಂದಿವೆ. ಪಹಲ್ಗಾಮ್ ದಾಳಿಗೆ ಕಳೆದೊಂದು ವರ್ಷದಿಂದ ನಿರಂತರ ಪ್ಲ್ಯಾನಿಂಗ್ ನಡೆದಿತ್ತಾ? ಎನ್ನುವ ಅನುಮಾನ ಮೂಡಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಪಿಓಕೆ ವ್ಯಾಪ್ತಿಯಲ್ಲಿರವ ಜೈಶ್ ಸಂಘಟನೆಯ ಉಗ್ರರ ತರಬೇತಿ ಶಿಬಿರಗಳಿಗೆ ಹಲವು ಬಾರಿ ಹಮಾಸ್ ನ ಪ್ರಮುಖ ನಾಯಕರು ಭೇಟಿ ನೀಡಿದ್ದಾರೆ. ಅಷ್ಟೇ ಅಲ್ಲಾ ಪ್ರವಾಸಿಗರ ಮೇಲಿನ ದಾಳಿಗೆ ಇದೇ ಹಮಾಸ್ ಕಮಾಂಡರ್ ಗಳು ಜೈಶ್ ಉಗ್ರರಿಗೆ ತರಬೇತಿಯನ್ನೂ ನೀಡಿದ್ದಾರೆ ಎನ್ನಲಾಗುತ್ತಿದೆ.
ಪಿಓಕೆ ವ್ಯಾಪ್ತಿಯಲ್ಲೇ ದಾಳಿಕೋರರಿಗೆ ಬಂದೂಕು ತರಬೇತಿ
ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾದ ಉಗ್ರರಿಗೆ ಪಿಓಕೆ ವ್ಯಾಪ್ತಿಯಲ್ಲೇ ತರಬೇತಿ ನೀಡಲಾಗಿದೆ. ಎಕೆ 47 ಬಂದೂಕು ಬಳಕೆ ಬಗ್ಗೆ ಖುದ್ದು ಹಮಾಸ್ ಕಮಾಂಡರ್ ಗಳೇ ಈ ಜಿಹಾದಿಗಳಿಗೆ ಪಾಠ ಮಾಡಿದ್ದಾರೆ. 1 ವರ್ಷದ ನಿರಂತರ ತರಬೇತಿ ಬಳಿಕವೇ ಸೂಕ್ತ ಸಮಯಕ್ಕೆ ಕಾದಿದ್ದು, ಹೊಂಚು ಹಾಕಿ ಸಂಚು ರೂಪಿಸಿ ಈ ಕಾರ್ಯ ಸಾಧಿಸಲಾಗಿದೆ. ಈಗಾಗಲೇ ಭಾರತದ ಏಜೆನ್ಸಿ ಗಳ ಬಳಿ ಹಮಾಸ್ ನಾಯಕರ ಪಿಓಕೆ ಭೇಟಿಯ ಹಲವು ಸಾಕ್ಷ್ಯಗಳು ಲಭ್ಯವಿದ್ದು, ಶೀಘ್ರವೇ ಜಗತ್ತಿನ ಮುಂದೆ ಹಮಾಸ್ ಪಾಲುದಾರಿಕೆ ಸತ್ಯ ಬಯಲಾಗಲಿದೆ.
ಈ ನಡುವೆ, ಇಸ್ರೇಲ್ ಅಂದು ಹಮಾಸ್ ಮೇಲೆ ತೀರಿಸಿಕೊಂಡ ಹಗೆಯಂತೆ ಭಾರತವೂ ಉಗ್ರರ ವಿರುದ್ಧ ಪ್ರತೀಕಾರ ಸಾಧಿಸಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ, ಭಾರತದ ವಿರುದ್ಧದ ಷಡ್ಯಂತ್ರಕ್ಕೆ ಹಮಾಸ್ ಕುಮ್ಮಕ್ಕು ಮುಂದಿನ ದಿನಗಳಲ್ಲಿ ಭಾರೀ ಬೆಲೆ ತೆರೆವಂತೆ ಮಾಡೋದ್ರಲ್ಲಿ ಅನುಮಾನವೇ ಇಲ್ಲ.



















