ಚಿತ್ರದುರ್ಗ: ದೇವಸ್ಥಾನದಲ್ಲಿ ಹೋಳಿಗೆ ಊಟ ಸೇವಿಸಿ 30 ಜನ ಅಸ್ವಸ್ಥರಾಗಿರುವ ಘಟನೆ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿಕು ರೆಡ್ಡಿಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಮಾರಮ್ಮ ದೇವಸ್ಥಾನದಲ್ಲಿ ನಿನ್ನೆ ಈ ಘಟನೆ ನಡೆದಿದೆ. 250ಕ್ಕೂ ಅಧಿಕ ಜನರು ಹೋಳಿಗೆ ಬಾಳೆಹಣ್ಣಿನ ಶೀಕರಣೆ ಊಟ ಸೇವಿಸಿದ್ದರು. ಅಸ್ವಸ್ಥರನ್ನು ಚಳ್ಳಕೆರೆ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಲವರು ಚೇತರಿಸಿಕೊಂಡಿದ್ದಾರೆ ಎನ್ನಲಾಗಿದೆ. ಆಸ್ಪತ್ರೆಗೆ ಚಳ್ಳಕೆರೆ ತಹಶಿಲ್ದಾರ್ ರೆಹಾನ್ ಪಾಷಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ಅಡಿಗೆಗೆ ಬಳಸಿದ ಆಹಾರ ಸಮಾಗ್ರಗಳ ಸ್ಯಾಂಪಲ್ ಗಳನ್ನು ಎಫ್ ಎಸ್ ಎಲ್ ಗಳಿಗೆ ಕಳುಹಿಸಲಾಗಿದೆ.