ಚುನಾವಣಾ ಆಯೋಗದ ಬಗ್ಗೆ ರಾಹುಲ್ ಗಾಂಧಿ ಅಮೆರಿಕಾದಲ್ಲಿ ಆರೋಪ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಲಕ್ಷ್ಮಣ್ ಸೌದಿ ಮಾತನಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊರದೇಶಕ್ಕೆ ಹೋದಾಗ ದೇಶದ ಅನೇಕ ನಾಯಕರು ಚರ್ಚೆ ಮಾಡಿರುತ್ತಾರೆ. ಮೋದಿ ಅವರು ಹೊರದೇಶಕ್ಕೆ ಹೋದಾಗ ಭಾರತದ ಬಗ್ಗೆ ಚರ್ಚೆ ಮಾಡಿಲ್ವಾ? ವಿದೇಶಕ್ಕೆ ಹೋದಾಗ್ಲೂ ಮೋದಿ.. ಮೋದಿ.. ಅಂತ ಘೋಷಣೆ ಕೂಗಿಸಲ್ವಾ? ನಮ್ಮ ದೇಶದ ಚರ್ಚೆ ಆಗ್ತಾ ಇರುತ್ತೆ ತಪ್ಪೇನಿದೆ? ಎಂದು ಹೇಳಿದ್ದಾರೆ.
ಇವತ್ತೇ ರಾಹುಲ್ ಗಾಂಧಿ ಆರೋಪ ಮಾಡಿಲ್ಲ. ಮೊದಲಿನಿಂದಲೂ ಆರೋಪ ಮಾಡುತ್ತಿದ್ದಾರೆ. ಹೊಸದಾಗಿ ಏನು ಆರೋಪ ಮಾಡಿಲ್ಲ. ಅವರಿಗೆ ಸಂಶಯ ವ್ಯಕ್ತವಾಗಿದೆ. ಹೀಗಾಗಿ ಅದರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಅದರ ಬಗ್ಗೆ ಅವರು ನಿಖರವಾಗಿ ಹೇಳಬೇಕಲ್ಲ. ಅವರು ಮಾಡಿಲ್ಲ ಅಂದ್ರೆ ಆಯ್ತು. ಬೇರೆ ದೇಶದವರು ನಮ್ಮ ದೇಶದ ಬಗ್ಗೆ ಚರ್ಚೆ ಮಾಡಲ್ವಾ? ನಮ್ಮ ದೇಶದವರು ಹೊರಗಡೆ ಹೋಗಿ ಚರ್ಚೆ ಮಾಡುವುದರಲ್ಲಿ ತಪ್ಪೇನಿದೆ ಎಂದು ಹೇಳಿದ್ದಾರೆ.
ಇದೇನು ದೇಶದ್ರೋಹಿ ಕೆಲಸನಾ? ನಮ್ಮ ದೇಶದ ಬಗ್ಗೆ ವ್ಯವಸ್ಥೆ ಬಗ್ಗೆ ಬೇರೆ ದೇಶದಲ್ಲಿ ಚರ್ಚೆ ಮಾಡಿದರೆ ತಪ್ಪೇನಿಲ್ಲ. ತಪ್ಪನ್ನು ಸುಧಾರಣೆ ಮಾಡಲು ಸಲಹೆ ಕೋಡಬಹುದು ಅಲ್ವ ಎಂದು ರಾಹುಲ್ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ.