ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರ ತೆಗೆಸಿದ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದ ಷಡ್ಯಂತ್ರವಿದೆ ಎಂದು ಶ್ರೀರಾಮ್ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.
ಕಾರವಾರದ ಶಿರಸಿಯಲ್ಲಿ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ವಿದ್ಯಾರ್ಥಿಯ ಜನಿವಾರ ತೆಗೆಸಿದ ಪ್ರಕರಣವನ್ನು ಖಂಡಿಸಿ ಏರ್ಪಡಿಸಲಾಗಿದ್ದ ಖಂಡನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸರಕಾರ ನಡೆಸುವವರು ದುರುದ್ದೇಶ ಪೂರ್ವಕವಾಗಿಯೇ ಬ್ರಾಹ್ಮಣರನ್ನು ಕಡೆಗಣಿಸುವುದರ ಉದ್ದೇಶದಿಂದ ಹೀಗೆ ಮಾಡಿದ್ದಾರೆ. ಇದು ಹೀಗೆ ಮತ್ತೊಮ್ಮೆ ಪುನರಾವರ್ತನೆಯಾದರೇ ಶಾಸ್ತ್ರ ಮತ್ತು ಶಾಸ್ತ್ರದೊಂದಿಗೆ ಹೊರ ಬರಬೇಕಾಗುತ್ತದೆ.



















