ದಾವಣಗೆರೆ: ಪರೀಕ್ಷಾ ಸಂದರ್ಭದಲ್ಲಿ ಜನಿವಾರದ ವಿಷಯದಲ್ಲಿ ಪರೀಕ್ಷೆ ತಪ್ಪಿಸಿದ್ದು ಕೇವಲ ವಿದ್ಯಾರ್ಥಿಯ ವಿಷಯವಲ್ಲ. ಅದು ಧರ್ಮ, ಸಂಸ್ಕೃತಿ ಮೇಲೆ ನಡೆದ ದಾಳಿ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಿನಿಂದ ಧರ್ಮ, ಸಂಸ್ಕೃತಿಯ ಮೇಲೆ ದಾಳಿಯಾಗುತ್ತಲೇ ಇದೆ. ಸಿಎಂ ಕುರ್ಚಿಗೆ ಕಂಟಕ, ಅಭದ್ರತೆ ಬಂದಾಗಲೂ ಇಂತವುಗಳನ್ನು ಮಾಡುತ್ತಾರೆ. ಈ ರೀತಿ ದಾಳಿ ಮಾಡಿಸಿ ಮೋಸ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂತರಾಜ್ ವರದಿ ಅವರೇ ತಯಾರಿಸಿ ಅವರೆ ಸಹಿ ಮಾಡಿಲ್ಲ. ಸದಸ್ಯರಾದ ಸಿಎಂ ಸಿದ್ದರಾಮಯ್ಯ ಸಹಿ ಮಾಡಿಲ್ಲ. ಆ ವರದಿಯನ್ನು ಬಚ್ಚಿಟ್ಟು ಜಯ ಪ್ರಕಾಶ್ ಮೂಲಕ ಬೇರೆ ವರದಿಯನ್ನು ಮಾಡಿಸಿದ್ದಾರೆ. ಜಾತಿ ಜನಗಣತಿ ಮಾಡುವುದಕ್ಕೆ ಇವರಿಗೆ ಅಧಿಕಾರನೇ ಇಲ್ಲ. ಜಾತಿ ಗಣತಿಯನ್ನು ಇವರು ಆರ್ಥಿಕ, ಸಾಮಾಜಿಕ ಗಣತಿಯನ್ನು ಮಾಡಿ ನ್ಯಾಯ ಒದಗಿಸಬೇಕು.
ಮೋದಿ ಅವರು ವಕ್ಫ್ ಗೆ ತಿದ್ದುಪಡಿ ತಂದಿದ್ದು ಮುಸ್ಲಿಂರಿಗೆ ಅನೂಕಲವಾಗಲಿ ಅಂತ. ವಕ್ಫ್ ಆಸ್ತಿಯನ್ನು ಅನೇಕ ಶ್ರೀಮಂತರು ಹೊಡೆದುಕೊಂಡಿದ್ದಾರೆ. ಸಿದ್ದರಾಮಯ್ಯ, ವೀರಶೈವ ಲಿಂಗಾಯತರಲ್ಲಿ 56 ಗುಂಪು ಮಾಡಿದರು. ಮುಸ್ಲಿಂರಲ್ಲಿ ಚಪ್ಪಲಿ ಹೊಲೆಯುವಂತ, ಬಂಗಿಗಳು, ಬಾರ್ಬರ್ ಗಳಿದ್ದಾರೆ. ಅಂತವರಿಗೆ ನ್ಯಾಯ ಕೊಡಿಸುವುದನ್ನು ಬಿಟ್ಟು ಜಾತಿ- ಧರ್ಮಗಳಲ್ಲಿ ಸಂಘರ್ಷ ಉಂಟು ಮಾಡುವ ಕೆಲಸ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

















