ರ್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಡಿವೋರ್ಸ್ ಕಥೆ ಎಲ್ಲರಿಗೂ ಗೊತ್ತಿದೆ. ಇನ್ನು ನಿವೇದಿತಾ ಗೌಡ ಜೊತೆಗಿನ ಸಂಬಂಧ ಮುರಿದ ಬಳಿಕ ಚಂದನ್ ಶೆಟ್ಟಿ ಸುಶ್ಮಿತಾ ಗೋಪಿನಾಥ್ ಜೊತೆ ಕಾಟನ್ ಕ್ಯಾಂಡಿ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು, ಇದು ವೈರಲ್ ಆಗುತ್ತಿದೆ.
ಬಾರ್, ಪಬ್ ಸೇರಿದಂತೆ ಅನೇಕ ಡಿಜೆ ಪಾರ್ಟಿ ಕಾರ್ಯಕ್ರಗಳಲ್ಲೂ ಇದರದ್ದೇ ಸದ್ದು ಜೋರಾಗಿದೆ. ಇವಳೇನಾ ಲಂಡನ್ ಕ್ವೀನು.. ಮಂಗಳೂರು ಬಂಗಡ ಮೀನು.. ತಾನಾಗೇ ಬುಟ್ಟಿಗೆ ಬಿತ್ತು ಎಂದು ಫುಲ್ ಗಮ್ಮತ್ತಿನಲ್ಲಿ ಚಂದನ್ ಶೆಟ್ಟಿ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಕಾಟನ್ ಕ್ಯಾಂಡಿ ಹಾಡಿನಲ್ಲಿ ಸುಶ್ಮಿತಾ ಗೋಪಿನಾಥ್ ಅವರು ಚಂದನ್ ಶೆಟ್ಟಿಗೆ ಸಾಥ್ ನೀಡಿದ್ದು, ಇದೀಗ ಇವರಿಬ್ಬರ ಜೋಡಿಗೆ ಫ್ಯಾನ್ಸ್ ತರಹೆವಾರು ಕಮೆಂಟ್ ಮಾಡುತ್ತಿದ್ದಾರೆ. ಇಬ್ಬರೂ ಜಾಸ್ತಿಯಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದು ಇಬ್ಬರೂ ಕೂಡ ಪ್ರೀತಿಯಲ್ಲಿ ಬಿದ್ದಿದ್ದಾರಾ ಅಂತ ಫ್ಯಾನ್ಸ್ ಪ್ರಶ್ನೆ ಮಾಡುತ್ತಿದ್ದಾರೆ.