ನ್ಯಾಷನಲ್ ಹೆರಾಲ್ಡ್ ಪ್ರಕರಣವೀಗ ಕಾಂಗ್ರೆಸ್ ಅತಿರಥರ ಬುಡಕ್ಕೆ ಬಂದು ನಿಂತಿದೆ. ಬಹುಕೋಟಿಗಳ ಈ ಹಗರಣ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಪುತ್ರ ರಾಹುಲ್ ಗಾಂಧಿ ಕೊರಳಿಗೆ ಕುಣಿಕೆಯಾಗುವ ಮುನ್ಸೂಚನೆ ನೀಡುತ್ತಿದೆ. ಪ್ರಕರಣದ ತನಿಖೆ ನಡೆಸಿದ ಇಡಿ ಇದೀಗ ಸೋನಿಯಾ ಆರೋಪಿ ನಂಬರ್ 1 ಹಾಗೂ ರಾಹುಲ್ ಗಾಂಧಿಯನ್ನು ಆರೋಪಿ ನಂಬರ್ 2 ಅಂತಾ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದೆ.
5 ಸಾವಿರ ಕೋಟಿ ಆಸ್ತಿ ಲಪಟಾಯಿಸುವ ಹುನ್ನಾರ?
ಅಸಲಿಗೆ 1937ರಲ್ಲಿ ಅಸೋಸಿಯೇಟ್ ಜರ್ನಲ್ ಲಿಮಿಟೆಡ್ ಒಡೆತನದಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಆರಂಭಿಸಲಾಗಿತ್ತು. ಕೇವಲ ಇಂಗ್ಲಿಷ್ ಅಲ್ಲದೆ ಉರ್ದು ಹಾಗೂ ಹಿಂದಿ ಭಾಷೆಯಲ್ಲೂ ಈ ಪತ್ರಿಕೆ ಮುದ್ರಣವಾಗುತ್ತಿತ್ತು. ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂರವರ ಕನಸಿನ ಕೂಸಾದ ಹೆರಾಲ್ಡ್ ಪತ್ರಿಕೆ 5 ಸಾವಿರ ಸ್ವಾತಂತ್ರ ಹೋರಾಟಗಾರ ಬಂಡವಾಳದೊಂದಿಗೆ ಆರಂಭಿಸಲಾಗಿತ್ತು.
ಅಂದು 5 ಲಕ್ಷ ಮೂಲ ಹೂಡಿಕೆಯೊಂದಿಗೆ ಆರಂಭವಾದ ಪತ್ರಿಕೆಯಲ್ಲಿ 100 ರೂ ಮುಖಬೆಲೆಯ 2 ಸಾವಿರ ಷೇರ್ ಗಳು ಹಾಗೂ 10ರ ಮಖಬೆಲೆಯ 30 ಸಾವಿರ ಸಾಮಾನ್ಯ ಷೇರುಗಳ ಮಾರಾಟದ ಮೂಲಕ ಎಜೆಎಲ್ ಸಂಸ್ಥೆ ಹಣ ಸಂಗ್ರಹಿಸಿತ್ತು. ಆದರೆ, ಕಾಲಕ್ರಮೇಣ ಪತ್ರಿಕೆ ಜನಪ್ರಿಯತೆ ಇಲ್ಲದೆ ಬಂಡವಾಳಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿಯೇ 2011ರಲ್ಲಿ ಎಐಸಿಸಿ ಮೂಲಕ ಕಂಪನಿಗೆ 90 ಕೋಟಿ ಸಾಲ ನೀಡಲಾಗುತ್ತೆ. ಆದರೆ, ಯಾವಾಗ ಈ ಹಣ ಮರು ಸಂದಾಯವಾಗಲಿಲ್ವೋ ಹೆರಾಲ್ಡ್ ನ ಸಮಸ್ತ ಆಸ್ತಿಯನ್ನು ಸೋನಿಯಾ ರಾಹುಲ್ ಒಡೆತನದ ಯಂಗ್ ಇಂಡಿಯಾಗೆ ಕೇವಲ 50 ಲಕ್ಷಕ್ಕೆ ಮಾರಾಟ ಮಾಡಲಾಗುತ್ತೆ.
ಸೋನಿಯಾ,ರಾಹುಲ್ ಹೆಸರಲ್ಲಿ 76 ಪ್ರತಿಷತ ಷೇರು!
ಹೆರಾಲ್ಡ್ ಕಂಪನಿಗೆ ದೆಹಲಿ. ಲಖನೌ, ಭೂಪಾಲ್, ಮುಂಬೈ, ಇಂದೋರ್ ಸೇರಿ ಹಲವೆಡೆ 2 ಸಾವಿರ ಕೋಟಿ ಮೌಲ್ಯದ ಆಸ್ತಿಯಿದೆ. ಅದರಲ್ಲೂ ದೆಹಲಿಯಲ್ಲೇ ಬರೋಬ್ಬರಿ 10 ಸಾವಿರ ಸ್ಕಯರ್ ಮೀಟರ್ ವ್ಯಾಪ್ತಿಯ 6 ಅಂತಸ್ತಿನ ಕಟ್ಟಡವಿದೆ. ಇಡಿ ಆರೋಪ ಪಟ್ಟಿ ಅನ್ವಯ ಇಂದು ಈ ನ್ಯಾಷನಲ್ ಹೆರಾಲ್ಡ್ ಗೆ ಸೇರಿದ ಆಸ್ತಿ ಮೌಲ್ಯ 5 ಸಾವಿರ ಕೋಟಿ ದಾಟುತ್ತೆ ಅಂತಾ ಉಲ್ಲೇಖಿಸಲಾಗಿದೆ. ಈ ಆಸ್ತಿ ಯಂಗ್ ಇಂಡಿಯಾಗೆ ವರ್ಗಾವಣೆಯಾಗಿದ್ದು, ಈ ಪೈಕಿ ಸೋನಿಯಾ, ರಾಹುಲ್ ಹೆಸರಲ್ಲೇ ಪ್ರತಿಷತ 76ರಷ್ಟು ಷೇರುಗಳಿವೆ. ಉಳಿದಂತೆ ಗಾಂಧಿ ಕುಟುಂಬಕ್ಕೆ ಪರಮಾಪ್ತರಾಗಿದ್ದ ಮೋತಿಲಾಲ್ ವೋರಾ ಹಾಗೂ ಆಸ್ಕರ್ ಫರ್ನಾಂಡಿಸ್, ಸ್ಯಾಮ್ ಪಿತ್ರೋಡಾ ಹೆಸರಲ್ಲೂ ಷೇರುಗಳಿವೆ. ಇನ್ನು ಇಡಿ ಆರೋಪಪಟ್ಟಿ ಸಲ್ಲಿಸ್ತಿದ್ದಂತೆ ಕಾಂಗ್ರೆಸ್ ಪಾಳಯದಲ್ಲಿ ಕಂಪನ ಶುರುವಾಗಿದೆ.
ಆರೋಪ ಸಾಬೀತಾದ್ರೆ 7 ವರ್ಷ ಜೈಲು ಶಿಕ್ಷೆ
ಒಂದು ಕಾಲದಲ್ಲಿ ರಾಜೀವ್ ಹಾಗೂ ಸೋನಿಯಾರಿಗೆ ಆಪ್ತರಾಗಿದ್ದ ಸುಬ್ರಮಣಿಯನ್ ಸ್ವಾಮಿಯಿಂದಲೇ ಈ ಪ್ರಕರಣ ಬೆಳಕಿಗೆ ಬಂದಿದ್ದು. ಹೆರಾಲ್ಡ್ ಬಹುಕೋಟಿ ಅಕ್ರಮದ ವಿರುದ್ಧ ಸಮರ ಸಾರಿದ್ದೇ ಸೋನಿಯಾ ಕುಟುಂಬದ ಮಾಜಿ ಪರಮಾಪ್ತ ಸುಬ್ರಮಣಿಯನ್ ಸ್ವಾಮಿ. ಸದ್ಯ ಆರೋಪ ಪಟ್ಟಿ ಕೋರ್ಟ್ ಗೆ ಸಲ್ಲಿಕೆಯಾಗಿದೆ. ಇನ್ನಷ್ಟೇ ವಾದ-ಪ್ರತಿವಾದಗಳು ಆರಂಭವಾಗಬೇಕಿದೆ. ಹಾಗೊಮ್ಮೆ ಸೋನಿಯಾ ಹಾಗೂ ರಾಹುಲ್ ಅಕ್ರಮವೆಸಗಿರೋದು ಸಾಬೀತಾದ್ರೆ 7 ವರ್ಷಗದಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತೆ.