ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ಕೊರಾಡಿಯ ವನದುರ್ಗಾಪರಮೇಶ್ವರಿ ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ನವಚಂಡಿಕಾ ಯಾಗ ಹಾಗೂ ಅಖಂಡ ಭಜನೋತ್ಸ ಏ. 24ರಿಂದ ಏ. 28ರ ವರೆಗೆ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಏ. 24ರಂದು ಗುರುವಾರ ಬೆಳಿಗ್ಗೆಯಿಂದ ರಾತ್ರಿಯವರೆಗೆ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ. ಏ. 25ರಂದು ಗಣಪತಿ ಪೂಜೆ ಪುಣ್ಯಾಹ, ರತ್ನನ್ಯಾಸ ಪೂರ್ವಕ ಪೀಠ ಪ್ರತಿಷ್ಠಾ ನವಗ್ರಹ ಹೋಮ, ಮುಹೂರ್ತ ಗ್ರಹಣ ಸುಮೂರ್ಹತದಲ್ಲಿ ವನದುರ್ಗಾಪರಮೇಶ್ವರಿಯ ಪ್ರತಿಷ್ಠಾ ಅಷ್ಟಬಂಧ ಸ್ಥಾಪನ ಜೀವಕುಂಭಾಭಿಷೇಕ ಪ್ರಾಣ ಪ್ರತಿಷ್ಠೆ, ತತ್ವ ಕಲಾಧಿನ್ಯಾಸಗಳು ಕೇತುಹೋಮ ನಿರೀಕ್ಷಾ ಪೂಜೆ ಧ್ವಜಾರೋಹಣ ಬಲಿ ಹಾಗೂ ಹೋಮಗಳು, ಸಂಜೆ ಗಣಪತಿ ಪೂಜೆ, ಪುಣ್ಯಾಹ ವಾಚನ, ದೇವತಾಶ್ವನ, ಭೇರೀತಾಡನ, ಗುಪ್ತಹೋಮ, ರಂಗೋತ್ಸವ ಪೂಜೆ ಬಲಿ, ರಾಜೋಪಚಾರ ಪೂಜೆ, ಬ್ರಹ್ಮಕಲಶಸ್ಥಾಪನ ಕಾರ್ಯಕ್ರಮಗಳು ನಡೆಯಲಿವೆ.
ಏ. 26ರಂದು ಶನಿವಾರ ಗಣಪತಿ ಪೂಜೆ ಪುಣ್ಯಾಹ, ಅಧಿವಾಸಾದಿ ಹೋಮಗಳು, ತತ್ವಕಲಾಧಿ ಹೋಮಗಳು, ಶಾಂತಿ ಪ್ರಾಯಶ್ಚಿತ್ತ ಹೋಮಗಳು, ಮಹಾಪೂರ್ಣಾಹುತಿ, ಬ್ರಹ್ಮಕಲಶಾಭಿಷೇಕ ಮಹಾಪೂಜೆ, ಭೂತಬಲಿ, ಧ್ವಜಾವರೋಹಣ ಅವ ಥ ಅಂಕುರಾರೋಪಣ ಪ್ರಸನ್ನ ಪೂಜೆ, ತೀರ್ಥ ಪ್ರಸಾದ ವಿತರಣೆ, ಮಹಾಅನ್ನಸಂತರ್ಪಣೆ ನಡೆಯಲಿದೆ.
ಏ. 27ರಂದು ಬೆಳಿಗ್ಗೆ 6ಕ್ಕೆ ಪ್ರದೀಪಸ್ಥಾಪನೆ, ಅಖಂಡ ಭಜನಾರಂಭ, ನವ ಚಂಡಿಕಾ ಕಲಶಸ್ಥಾಪನೆ ಪಾರಾಯಣ ಜಪ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.
ಏ. 28ರಂದು ಬೆಳಿಗ್ಗೆ 6ಕ್ಕೆ ಭಜನಾ ಮಂಗಲೋತ್ಸವ ನವಚಂಡಕಾ ಹೋಮ, ಪೂರ್ಣಾಹುತಿ ಮಧ್ಯಾಹ್ನ ಮಹಾ ಪೂಜೆ, ತೀರ್ಥ ಪ್ರಸಾದ ವಿತರಣೆ ಅನ್ನಸಂತರ್ಪಣೆಯೊಂದಿಗೆ ಕಾರ್ಯಕ್ರಮ ನಡೆಯಲಿವೆ.
ಭಕ್ತರು ಏ. 23ರಂದು ದೇವಸ್ಥಾನ ಸನ್ನಿಧಿಗೆ ಕಾಣಿಕೆ ಸಮರ್ಪಿಸಬೇಕೆಂದು ಆಡಳಿತ ಮಂಡಳಿ ಮನವಿ ಮಾಡಿದೆ. ಈಕುರಿತು ಅನುವಂಶಿಕ ಮೊಕ್ತೇಸರರಾದ ನಂದಕಿಶೋರ್ ಉಳ್ಳಾಲ ಪ್ರಕಟಣೆಯಲ್ಲಿ ಕೋರಿದ್ದಾರೆ.