ಪುತ್ತೂರು: ಚಲಿಸುತ್ತಿದ್ದ ಕಾರಿನಲ್ಲಿ ಯುವಕರು ಹುಚ್ಚಾಟ ಮೆರೆದಿರುವ ಘಟನೆ ನಡೆದಿದೆ.
ರಸ್ತೆಯಲ್ಲಿ ಹೋಗುತ್ತಿದ್ದಾಗ ಈ ರೀತಿ ಹುಚ್ಚಾಟ ಮೆರೆದಿದ್ದಾರೆ. ಯುವಕರ ಹುಚ್ಚಾಟ ದಾರಿಹೋಕರ ಮೊಬೈಲ್ ನಲ್ಲಿ ಸೆರೆಯಾಗಿ, ವೈರಲ್ ಆಗಿತ್ತು. ಇದನ್ನು ಗಮನಿಸಿದ ಪೊಲೀಸರು, ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಚಾಲಕನ ವಿರುದ್ಧ ಬಿ.ಎನ್.ಎಸ್ ಕಾಯ್ದೆ 281 ಮತ್ತು ಮೋಟಾರು ಕಾಯ್ದೆ 184 ರಂತೆ ಪ್ರಕರಣ ದಾಖಲಾಗಿದೆ. ಕಾರಿನ ಕಿಟಕಿಯಿಂದ ಹೊರಗೆ ಬಂದು ರಸ್ತೆಯಲ್ಲಿ ಬೊಬ್ಬೆ ಹಾಕಿ ಹುಚ್ಚಾಟ ನಡೆಸಿದ್ದಾರೆ. ಯುವಕರ ಈ ಹುಚ್ಚಾಟವನ್ನು ರಸ್ತೆ ಪ್ರಯಾಣಿಕರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದರು.
ಮಾಣಿ-ಮೈಸೂರು ರಸ್ತೆಯ ಗೂನಡ್ಕ ಎಂಬಲ್ಲಿ ಈ ಘಟನೆ ನಡೆದಿದೆ.